ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ

0

ಅಧ್ಯಕ್ಷರಾಗಿ ಸಾವಿತ್ರಿ ಭಟ್ – ಉಪಾಧ್ಯಕ್ಷೆ ಮೀನಾಕ್ಷಿ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಕುದ್ಕುಳಿ ದೊಡ್ಡಕುಮೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲಾ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಿತು. ಜನವರಿ 22ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು.
ನಿರ್ದೇಶಕರುಗಳಾಗಿ ಸರೋಜ ಕೋಣಗುಂಡಿ, ಸುಶೀಲ ಕೋಣಗುಂಡಿ, ರಾಧಮ್ಮ ಪಡ್ಪು, ಕೆ ಎಮ್ ಶೇಷಮ್ಮ ಕುಂಟುಕಾಡು , ಲೀಲಾವತಿ ಮುಪ್ಪಸೇರು, ಎಂ ಟಿ ವನಿತಾ ಮೆತ್ತಡ್ಕ , ಪದ್ಮಾವತಿ ಚಲ್ಲಂಗಾಯ, ಚಿನ್ನಮ್ಮ ದೊಡ್ಡಡ್ಕ ಇವರು ಆಯ್ಕೆಯಾಗಿದ್ದಾರೆ