ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ

0

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ೭೬ ನೇ ಗಣರಾಜ್ಯೋತ್ಸವ ನಡೆಯಿತು. ಸಂಸ್ಥೆಯ ಸಂಚಾಲಕರಾದ ಕೆ ಆರ್ ಗಂಗಾಧರ್ ರವರು ರಾಷ್ಟ್ರದ್ವಜಾರೋಹಣ ಮಾಡಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಕೆ ಆರ್ ಗಂಗಾಧರ್ ರವರು ಸಂವಿಧಾನದ ರಚನೆ ಹಿಂದಿನ ಇತಿಹಾಸವನ್ನು ಉಲ್ಲೀಖಿಸುತ್ತಾ ದೇಶದ ಹಿಂದುಳಿದ ವರ್ಗ ಸಮಾಜದ ಮುಖ್ಯವಾಹಿನಿಯೊಳಗೆ ಒಂದಾಗಿ ಗೌರವಯುತವಾಗಿ ಬಾಳುವಂತಾಗಲು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕೊಡುಗೆಯನ್ನು ಸ್ಮರಿಸಬೇಕು. ಒಂದು ರಾಷ್ಟ್ರ ಸುಭದ್ರ ವಾಗಿರಬೇಕಾದರೆ ದೇಶ ಪ್ರೇಮ ಬೆಳೆಸಿಕೊಳ್ಳುವಲ್ಲಿ ನವ ಯುವಜನತೆ ಜಾಗೃತರಾಗಬೇಕು ಎಂದು ಕರೆಕೊಟ್ಟರು.

ಪ್ರಾಂಶುಪಾಲ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕವೃಂದ ಉಪಸ್ಥಿತರಿದ್ದರು. ಶಿಕ್ಷಕ ಕಿಶೋರ್ ಕುಮಾರ್ ಸ್ವಾಗತಿಸಿ, ಸೋಮಶೇಖರ್ ಪಿ. ಧನ್ಯವಾದ ಸಮರ್ಪಿಸಿದರು.