ಬಂದಡ್ಕದ ಗೌರಿಕರೆ ಶ್ರೀ ಅಣ್ಣಪ್ಪ, ಚೆಡೇಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಪುನ ಪ್ರತಿಷ್ಠೆಯ ಭಾಗವಾಗಿ ಚಾಮುಂಡೇಶ್ವರಿ ಅಮ್ಮನ ಮುಖಬಿಂಬದಿಂದ ಪುಷ್ಪಕ್ಕೆ ದೈವ ಚೈತನ್ಯವನ್ನು ಗುರು ಆಚಾರ ಪ್ರಕಾರ ಆವಾಹಿಸುವ ಕಾರ್ಯಕ್ರಮವು ಜ.27ರಂದು ನಡೆಯಿತು.
ತರವಾಡು ಕಾರ್ನವರು ದೇವು. ಬಿ ಅವರ ಸಾನಿಧ್ಯದಲ್ಲಿ ಕೊರಗ ಬಿ ಅವರು ಮೇಲ್ನೋಟ ವಹಿಸಿದ್ದರು.
ಗೌರಿಕರೆ ತರವಾಡು ರಕ್ಷಾಧಿಕಾರಿಗಳಾದ ಬಾಬು, ಉಕ್ರನ್,ಜನಾರ್ಧನ ಬಿ,ಕೃಷ್ಣನ್ ಬಿ, ನೇತೃತ್ವ ವಹಿಸಿ ನಾರಾಯಣ ಅವರ ಮಹನೀಯ ಕಾರ್ಮಿಕತ್ವದಲ್ಲಿ ಪೂಜಾದಿ ಕ್ರಮಗಳು ನಡೆಯಿತು.