ಅಡ್ಕಾರು : ಸ್ಕಿಡ್ ಆಗಿ ಕಾಂಪೌಂಡಿಗೆ ಗುದ್ದಿದ ಕಾರು

0

ಮಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ XUV ಕಾರು ರಸ್ತೆಯಲ್ಲಿ ಸ್ಕಿಡ್ ಆಗಿ ರಸ್ತೆ ಪಕ್ಕದ ಕಾಂಪೌಂಡಿಗೆ ಗುದ್ದಿ ಜಖಂ ಗೊಂಡ ಘಟನೆ ಮಾ.26ರಂದು ರಾತ್ರಿ ಅಡ್ಕಾರು ಬಳಿ ನಡೆದಿದೆ.

ಸುಳ್ಯ ಅಂಬೆಟಡ್ಕದ ನಿವಾಸಿಗಳಾದ ಜಗದೀಶ್ ಮತ್ತು ಮಧುರ ಜಗದೀಶ್ ದಂಪತಿಗಳು ತಮ್ಮ ಪುತ್ರನೊಂದಿಗೆ ಮಂಗಳೂರಿಗೆ ಹೋಗಿ ಸುಳ್ಯಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ಅಡ್ಕಾರು ಕರಾವಳಿ ಹೋಟೆಲ್ ಮುಂಭಾಗ ಈ ಘಟನೆ ಸಂಭವಿಸಿದ್ದು, ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡಿದೆ.


ಕಾರಿನಲ್ಲಿದ್ದ ಮೂವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.