ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯ ನೋಂದಾವಣೆ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರವು ಅಮರಮುಡ್ನೂರು ಪಂಚಾಯತ್ ಸಭಾಭವನದಲ್ಲಿ
ಇಂದು ನಡೆಯಿತು.
ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರು ಮಾತನಾಡಿ “ಈಗಾಗಲೇ 92% ರಷ್ಟು ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದಿರುತ್ತಾರೆ. ಉಳಿದ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ ಯವರ ಆದೇಶದ ಪ್ರಕಾರ ಗ್ರಾಮ ಮಟ್ಟದಲ್ಲಿ ಯೋಜನೆಗಳ ವಿಲೇವಾರಿ ಶಿಬಿರದ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಿ.ಡಿ.ಪಿ.ಒ ಶೈಲಜಾ,ತಾ.ಪಂ.ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು,ಪಂ.ಮಾಜಿ ಅಧ್ಯಕ್ಷೆ ಪದ್ಮ ಪ್ರಿಯಾ ಮೇಲ್ತೋಟ, ಪಂ.ಸದಸ್ಯರಾದ ಅಶೋಕ ಚೂಂತಾರು, ಜನಾರ್ದನ ಪೈಲೂರು, ವೆಂಕಟ್ರಮಣ ಇಟ್ಟಿಗುಂಡಿ,ಹೂವಪ್ಪ ಗೌಡ ಆರ್ನೋಜಿ, ತೇಜಾವತಿ ಕುಂಟಿಕಾನ, ಸೀತಾ ಹೆಚ್, ಶಶಿಕಲಾ ಕೇನಡ್ಕ,ಮೀನಾಕ್ಷಿ ಚೂಂತಾರು ರವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಪಿ.ಡಿ.ಒ ದಯಾನಂದ ಸ್ವಾಗತಿಸಿದರು.
ಗ್ಯಾರಂಟಿ ಯೋಜನೆಯ ಮೇಲ್ವಿಚಾರಕ ಭವಾನಿ ಶಂಕರ ಕಲ್ಮಡ್ಕ ವಂದಿಸಿದರು. ಗ್ರಂಥಾಲಯ ಮೇಲ್ವಿಚಾರಕ ಸಂತೋಷ್ ಮುಂಡಕಜೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ
ಪಂಚ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.