ನಳಿನ್‌ಕುಮಾರ್ ಕಟೀಲ್ ಸಂಸದರಾಗಿದ್ದ ಅವಧಿಯಲ್ಲಿ ಮಂಜೂರಾದ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ

0

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಂಸದ ಕಟೀಲ್

ಸುಳ್ಯದ ಕುರುಂಜಿಭಾಗ್ ವಾರ್ಡ್‌ನ ಐಪಿಎಸ್ ಶಾಲೆಯ ತಿರುವಿನಿಂದ ಉಜಿರುಗಳಿ ರಸ್ತೆಯ 11೦ ಮೀಟರ್ ಉದ್ದದ 6 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡಿದ್ದು, ಡಿ. ೨೪ರಂದು ಇದರ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಭಾಗವಹಿಸಿದ್ದರು. ಇವರು ಸಂಸದರಾಗಿದ್ದ ವೇಳೆ ಸುಮಾರು 6 ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಿದ್ದರು.


ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರಿಬ್ಬನ್ ಕತ್ತರಿಸಿ ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಉಜ್ವಲ್ ಊರುಬೈಲು, ಶ್ರೀನಾಥ್ ಬಾಳಿಲ, ಹೇಮಂತ್ ಕಾಮತ್, ಸ್ಥಳಿಯ ಮುಖಂಡರಾದ ಎನ್.ಎ.ರಾಮಚಂದ್ರ, ಮುಖಂಡರುಗಳಾದ ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ, ಗಿರೀಶ್ ಕಲ್ಲುಗದ್ದೆ, ದೊಡ್ಡಣ್ಣ ಬರೆಮೇಲು, ಬೂಡು ರಾಧಾಕೃಷ್ಣ ರೈ, ಜಿನ್ನಪ್ಪ ಪೂಜಾರಿ, ದಿನೇಶ್, ವಕೀಲರಾದ ಶ್ಯಾಂ ಪಾನತ್ತಿಲ, ಜ್ಞಾನೇಶ್ ಶೇಟ್, ಜಗದೀಶ್, ಸ್ಥಳಿಯ ಬೂತ್ ಅಧ್ಯಕ್ಷ ರಂಜಿತ್, ಹರ್ಷಿತಾ ರಂಜಿತ್, ವಕೀಲೆ ಪ್ರತಿಭಾ ಜ್ಯೋತಿ, ಸ್ಥಳಿಯರಾದ ಸತ್ಯನಾರಾಯಣ, ನ.ಪಂ. ಸದಸ್ಯ ಸುಧಾಕರ, ಯಶೋಧಾ ರಾಮಚಂದ್ರ, ಗಿರಿಧರ, ಗುತ್ತಿಗೆದಾರ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳಿಯ ನ.ಪಂ. ಸದಸ್ಯೆ ಶ್ರೀಮತಿ ಶೀಲಾ ಅರುಣ ಕುರುಂಜಿ ಸ್ವಾಗತಿಸಿ, ಸುನಿಲ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.