ವೀರಾಜಪೇಟೆ ವಿಧಾನ ಸಭಾ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ ಏ.ಎಸ್.ಪೊನ್ನಣ್ಣ ರವರು ಚೆಂಬುಗ್ರಾಮದಲ್ಲಿ ಸುಮಾರು 1.53 ಕೋಟಿ ರೂಪಾಯಿ ವೆಚ್ಚದಲ್ಲಿಅನುಷ್ಠಾನಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಡಬ್ಬಡ್ಕ ಗೋಪಾಲರವರ ಜಮೀನು ಪಕ್ಕ ತಡೆಗೋಡೆ ನಿರ್ಮಾಣ 45 ಲಕ್ಷ,ಮಾರ್ಪಡ್ಕದಲ್ಲಿ ಮಳೆಯಿಂದ ಹಾನಿಗೀಡಾದ ಸೇತುವೆ ಮರುನಿರ್ಮಾನಕ್ಕೆ 43 ಲಕ್ಷ, ಕೂಡಡ್ಕ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ8.16 ಲಕ್ಷ, ಪರ್ದಾಯಗದ್ದೆ ರಸ್ತೆ ಅಭಿವೃದ್ದಿ, ಉಂಬಾಳೆ ಜನತಾ ಕಾಲೊನಿ ರಸ್ತೆ ಅಭಿವೃದ್ದಿಗೆ 5 ಲಕ್ಷ,ಪನೇಡ್ಕ- ಬೈನೆಗುಂಡಿ ರಸ್ತೆ ಅಭಿವೃದ್ದಿಗೆ 5 ಲಕ್ಷ, ರೆಂಕಿಲುಮೊಟ್ಟೆ ರಸ್ತೆ ಅಭಿವೃದ್ದಿಗೆ 5ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಒಂದೂವರೆ ವರ್ಷದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.ಪ್ರಸ್ತುತ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಮತ್ತು ಪ್ರಯೋಜನ ಪಡೆದ ಫಲಾನುಭವಿಗಳ ಅಂಕಿ ಅಂಶಗಳನ್ನು ನೀಡಿದರು.ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ನವೀನ್ ರಾಮಕಜೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತೀರ್ಥರಾಮ ಪೂಜಾರಿಗದ್ದೆ, ಪಂಚಾಯತ್ ಸದಸ್ಯರುಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು,ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರುಗಳು,ರವಿರಾಜ್ ಹೊಸೂರು, ಅರೆಭಾಷೆ ಅಕಾಡಮಿ ಸದಸ್ಯರಾದ ಲೋಕೇಶ್ ಊರುಬೈಲು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಈ ಮಧ್ಯೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ದೊಡ್ಡೇಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಸೂರಜ್ ಹೊಸೂರು ,ಕ್ಲಸ್ಟರ್ ಸಿ ಆರ್ ಪಿ ಚಂದ್ರಶೇಖರ ಜಿ.ವಿ,ಎಸ್.ಡಿ.ಎಂ.ಸಿ.ಸದಸ್ಯರುಗಳು,ಸಾರ್ವಜನಿಕರು ಉಪಸ್ಥಿತರಿದ್ದರು.