✍️ ರೇಶ್ಮ ವೀರ ಕ್ರಾಸ್ತಾ , ತಡಗಜೆ ಬೆಳ್ಳಾರೆ
ಕ್ರಿಸ್ಮಸ್ ಎಂದರೆ ಯೇಸುಕ್ರಿಸ್ತನು ಜನಿಸಿದ ಸಂಭ್ರಮದ ದಿನ ವಿಶ್ವದಾದ್ಯಂತ ಪ್ರತೀ ವರ್ಷ ಡಿಸೆಂಬರ್ ತಿಂಗಳ 25ನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವನ್ನಾಗಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ಯೇಸು ಕ್ರಿಸ್ತನ ಜನನವನ್ನು ಗುರುತಿಸುವ ವಾರ್ಷಿಕ ಆಚರಣೆಯಾಗಿದೆ ಕ್ರೈಸ್ತ ಬೈಬಲ್ ಗ್ರಂಥದ ಸುವಾರ್ತೆಯ ಪ್ರಕಾರ ಯೇಸು ಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ ದೇಶದಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಜನಿಸಿದ.
ಯೇಸು ತಮ್ಮ ಏಕೈಕ ಮಗನನ್ನು ಈ ಧರೆಗೆ ನೀಡಿದ ಸಂತಸದ ಹಬ್ಬ ಜಗತ್ತಿಗೆ ಪ್ರೀತಿ, ವಾತ್ಸಲ್ಯ, ಶಾಂತಿ, ಸಂತೋಷ ಬೆಳಕನ್ನು ಪಸರಿಸಿದ ಯೇಸು ಕ್ರಿಸ್ತನ ಬರುವಿಕೆಯನ್ನು ಆಚರಿಸುವ ಸಂತಸದ ಹಬ್ಬ. ಕ್ರಿಸ್ಮಸ್ ಎಂದರೆ ಹಗೆತನ ಕೋಪ,ಕ್ರೌರ್ಯ, ಮಸ್ಸರ ಎಂಬ ಕತ್ತಲೆಯನ್ನು ದೂರ ಮಾಡಿ ಶಾಂತಿ, ಪ್ರೀತಿ, ವಾತ್ಸಲ್ಯ ಸಂತೋಷ ಎಂಬ ಬೆಳಕನ್ನು ಬರಮಾಡಿಕೊಳ್ಳುವ ಹಬ್ಬ.
ಕ್ರಿಸ್ಮಸ್ ಹಬ್ಬ ಆಚರಣೆಗಾಗಿ ಕ್ರೈಸ್ತರ ಮನೆಗಳಲ್ಲಿ ಹತ್ತು ಹದಿನೈದು ದಿನಗಳ ಮುಂಚಿತವಾಗಿಯೇ ಸಡಗರ ಸಂಭ್ರಮದ ದಿನಕ್ಕಾಗಿ ಸಿದ್ಧತೆಗಳು ಆರಂಭಗೊಳ್ಳುತ್ತವೆ. ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ದೇವ ಕುವರನ ಇರುವಿಕೆಯನ್ನು ಗುರುತಿಸಿದ ಬೆಳಕಿನ ಸಂದೇಶವನ್ನು ಸಾರುವ ನಕ್ಷತ್ರ(star)- ಗೂಡು ದೀಪ ಎಲ್ಲರ ಮನೆಗಳಲ್ಲಿ ಪ್ರಜ್ವಲಿಸುತ್ತದೆ. ಕ್ರಿಸ್ಮಸ್ ಟ್ರೀ ತಯಾರಿಯನ್ನು ಕೂಡ ಕಾಣಬಹುದು ಪರಸ್ಪರ ಶುಭಾಶಯಗಳನ್ನು ಗ್ರೀಟಿಂಗ್ ಕಾರ್ಡನ್ನು ಕಳಿಸುವುದರ ಮೂಲಕ ಕೋರುತ್ತಾರೆ. ಹಾಗೂ ಕ್ರಿಸ್ಮಸ್ ಹಬ್ಬದಲ್ಲಿ ಆಕರ್ಷಣೆ ಎಂದರೆ ಸಂತಾ ಕ್ಲಾಸ್ ಇದನ್ನು ಸೈಟ್ ನಿಕೋಲಸ್ ಎಂಬ ಸನ್ಯಾಸಿ ಕ್ರಿಸ್ತಶಕ 280 ರ ಸುಮಾರಿಗೆ ಜಾರಿಗೆ ತಂದರು. ಇಂದಿಗೂ ಅದನ್ನು ಆಕರ್ಷಣೆಯ ಕೇಂದ್ರ ಬಿಂದುವಾಗಿ ಆಚರಿಸಲಾಗುತ್ತದೆ. ಆತ ಬಡವರ ಮನೆಮನೆಗೆ ತೆರಳಿ ವಿಶೇಷ ಉಡುಗೊರೆಗಳನ್ನು ಯಾರಿಗೂ ತಿಳಿಯದಂತೆ ಇಡುತ್ತಿದ್ದ. ಇಂದಿಗೂ ಕ್ಯಾರಲ್ ಹಾಡಿನ ಮೂಲಕ ಮನೆ ಮನೆಗೆ ತೆರಳಿ ಹಾಡು,ಡ್ಯಾನ್ಸ್ ಮೂಲಕ ಸಂತಕ್ಲಾಸ್ ವೇಷದಾರಿ ಸ್ವೀಟ್ಸ್ ಹುಡುಗರೆಯನ್ನು ನೀಡುತ್ತಾರೆ.
ಈ ಹಬ್ಬದ ಸಂಭ್ರಮಕ್ಕೆ ಕುಸ್ವರ್ ಎಂಬ ತಿಂಡಿ ತಿನಿಸು ತಯಾರಿಸುತ್ತಾರೆ ಈ ಹಬ್ಬದ ವಿಶೇಷ ತಿಂಡಿ ಕೂಡ ಹೌದು.
ಯೇಸು ಕ್ರಿಸ್ತ ದನದ ಕೊಟ್ಟಿಗೆಯಲ್ಲಿ ಜನಿಸಿದ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಆತನ ಜನನವಾಯಿತು ಆ ಸಂದರ್ಭವನ್ನು ಮರು ಸೃಷ್ಟಿಸುವುದೇ ಕ್ರಿಬ್ ಅಥವಾ ಗೋದಲಿ ಎಂದು ಕರೆಯುತ್ತೇವೆ. ಕ್ರೈಸ್ತರ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಹುಲ್ಲು ಹಾಸಿನ ಸಣ್ಣ ದನದ ಕೊಟ್ಟಿಗೆ, ಕುರಿ ದನಗಳ ರೀತಿಯ ಗೊಂಬೆಗಳು ಹಚ್ಚಹಸುರಿನ ಗದ್ದೆ, ಸಣ್ಣ ಸಣ್ಣ ಕಲ್ಲುಗಳನ್ನು ಹಾಸಿ ನದಿಯನ್ನು ಸೃಷ್ಟಿಸಿರುವುದು ಪರ್ವತಗಳ ಇರುವಿಕೆ ಇವೆಲ್ಲವನ್ನು ಗೋದಲಿಯಲ್ಲಿ ಕಾಣುತ್ತೇವೆ. ಇದು ದೇವಕುವರನ ಜನನದ ಮರು ಸೃಷ್ಟಿಯಾಗಿದೆ. ಈ ಹಬ್ಬದ ಇನ್ನೊಂದು ವಿಶೇಷ ಕೇಕ್ ಬಗೆಬಗೆಯ ಕೇಕುಗಳು ಮಾರುಕಟ್ಟೆಯಲ್ಲಿ ಆ ಸಂದರ್ಭದಲ್ಲಿ ಲಭ್ಯವಿರುತ್ತವೆ. ಜನ್ಮದಿನಕ್ಕೆ ಸಾಮಾನ್ಯವಾಗಿ ಕೇಕನ್ನು ಕತ್ತರಿಸುತ್ತೇವೆ. ಹಾಗಾಗಿ ದೇವ ಕುವರನ ಆಗಮನವನ್ನು ಕೇಕನ್ನು ಸವಿದು ಸಂಭ್ರಮಿಸುತ್ತಾರೆ. ಡಿಸೆಂಬರ್ 24ರ ಸಂಜೆಯಿಂದಲೇ ಕ್ರಿಸ್ಮಸ್ ಹಬ್ಬದ ಸಂಭ್ರಮದ ವಿಶೇಷ ಬಲಿ ಪೂಜೆ ಪೂಜಾ ವಿಧಿ ವಿಧಾನವನ್ನು ಚರ್ಚುಗಳಲ್ಲಿ ನಡೆಸಲಾಗುತ್ತದೆ. ಕ್ಯಾರಲ್ ಗಾಯನ ಈ ಹಬ್ಬದ ವಿಶೇಷ ಆಕರ್ಷಣೆ ಆಗಿರುತ್ತದೆ ತದನಂತರ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕ್ರಿಸ್ಮಸ್ ಹಬ್ಬವು ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ ಕ್ರಿಶ್ಚಿಯನ್ ಧರ್ಮದಲ್ಲಿ ದೇವರ ಮಗನೆಂದು ನಂಬಲಾದ ಯೇಸು ಕ್ರಿಸ್ತನ ಜನ್ಮದ ನೆನಪಿಗಾಗಿ ಆಚರಿಸಲಾಗುತ್ತದೆ ಕ್ರಿಸ್ಮಸ್ ಎಂಬ ಪದವು ಕ್ರಿಸ್ತನ ಜನರು ಎಂದು ಅನುವಾದಿಸಲ್ಪಟ್ಟಿದೆ ಹಾಗಾಗಿ ಕ್ರಿಸ್ತನ ಜನರು ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ ಭಾರತದಲ್ಲಿ ಕ್ರಿಸ್ಮಸ್ ಹಬ್ಬವನ್ನು ಹೆಚ್ಚು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ದೇವಕುಮಾರ ಜನಿಸಿದ್ದು ಕತ್ತಲಿನಲ್ಲಿದ್ದ ಜನರನ್ನು ಬೆಳಕಿನೆಡೆಗೆ ತರಲು ನಾವು ಕೂಡ ಹಿಂಸೆ,ಕೋಪ, ಮತ್ಸರವನ್ನು ಬಿಟ್ಟು ಬೆಳಕೆಂಬ ಶಾಂತಿ, ಪ್ರೀತಿ,ವಾತ್ಸಲ್ಯ ಸೌಹಾರ್ದತೆ ತುಂಬಿದ ನಾಡು ಕಟ್ಟೋಣ ಹಾಗೂ ಅಂತಹ ನಾಡು ನಮ್ಮದಾಗಲಿ ಎಂದು ಆಶಿಸುತ್ತಾ ಎಲ್ಲರಿಗೂ ಹ್ಯಾಪಿ ಕ್ರಿಸ್ಮಸ್ ಎಲ್ಲರಿಗೂ ಒಳಿತಾಗಲಿ
ರೇಶ್ಮ ವೀರ ಕ್ರಾಸ್ತಾ
ತಡಗಜೆ ಬೆಳ್ಳಾರೆ.