ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಪ್ರಾರ್ಥನೆ

0

ಜಗತ್ತಿಗೆ ಪ್ರೀತಿ, ಶಾಂತಿ,ಸಹೋದರರತೆ ಸಂದೇಶ ಸಾರಿದ ಯೇಸುಕ್ರಿಸ್ತ ಹುಟ್ಟಿದ ದಿನ ಕ್ರಿಸ್ಮಸ್ ಹಬ್ಬವನ್ನು ಡಿ.25 ರಂದು ಆಚರಿಸಲಾಯಿತು.ಕ್ರಿಸ್ಮಸ್ ಹಬ್ಬದ ಸಲುವಾಗಿ ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ, ಬಲಿಪೂಜೆ ಡಿ.24 ರಂದು ಸಂಜೆ ನಡೆಯಿತು.ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ರೆ.ಫಾ ವಿಕ್ಟರ್ ಡಿಸೋಜ ಹಾಗೂ‌ ಕಾರ್ಮಲೈಟ್ ಫಾದರ್ ಅಶ್ವಥ್ ಡಿಸೋಜ ರವರು ಪೂಜೆ ಕಾರ್ಯಕ್ರಮ ನೆರವೇರಿಸಿದರು.ಸುಳ್ಯ ಬ್ರಿಜಿಡ್ಸ್ ಚರ್ಚ್ ನ ಭಕ್ತಾದಿಗಳು, ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ‌ ಕ್ರಾಸ್ತ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಮೊದಲಾದವರು ಭಾಗವಹಿಸಿದರು.