ಕೊಡಗು ಸಂಪಾಜೆ: ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆ

0

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಮತ ಪ್ರಚಾರ

ಕೊಡಗು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯು ಡಿಸೆಂಬರ್ 29 ರಂದು ನಡೆಯಲಿದ್ದು, ಇದರ ಭಾಗವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಮತ ಪ್ರಚಾರವು ಡಿ. 26ರಂದು ಕೊಯನಾಡು ಮತ್ತು ಸಂಪಾಜೆ ವ್ಯಾಪ್ತಿಯಲ್ಲಿ ನಡೆಯಿತು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅನಂತ ಎನ್.ಸಿ , ತೀರ್ಥಪ್ರಸಾದ್ ಕೋಲ್ಚಾರು, ಯಶವಂತ ದೇವರ ಗುಂಡ, ಹೊನ್ನಪ್ಪ ಕಾಸ್ಪಾಡಿ, ಫಕೀರ ಹರಿಜನ, ಕಿಶನ್ ಪೊನ್ನಟಿಯಾಂಡ, ವಾಣಿ ಜಗದೀಶ್ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೊಡಗು ಸಂಪಾಜೆ ಗ್ರಾಂ.ಪಂ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ , ಯಶೋಧರ ಬಿ. ಜೆ ,ಓ.ಆರ್ . ಮಾಯಿಲಪ್ಪ, ರಾಜಾರಾಮ ಕಳಗಿ , ಉದಯ ಹನಿಯಡ್ಕ, ಯಮುನಾ ಗಿರೀಶ್, ನಿರ್ಮಲಾ ಭರತ್, ಶ್ರೀಧರ ಪಡ್ಫೂ,ಪೂರ್ಣಿಮಾ ಬಾಲಕೃಷ್ಣ, ಲೋಕಯ್ಯ ನಡು ಬೆಟ್ಟು ,ವಿಮಲಾ ಪ್ರಸಾದ್, ಮೀನಾ ಕುಮಾರಿ, ಕೊರಗಪ್ಪ ಅರಮನೆ ತೋಟ, ಜಗದೀಶ್ ಕೆ. ಪಿ ಹಾಗೂ ಕಿರಿಯ ಹಿರಿಯ ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾದರು.