ಉತ್ತಮ ಸಮಾಜ ನಿರ್ಮಾಣದಲ್ಲಿ ಮಾತೆಯರ ಪಾತ್ರ ಮಹತ್ವದ್ದು: ಡಾ.ದೇವಿಪ್ರಸಾದ್ ಕಾನತ್ತೂರ್
ಕಟ್ಟಕಡೆಯ ಜನರ ಮುಖ್ಯವಾಹಿನಿಗೆ ತರಲು ಆರಂಭ ಗೊಂಡ ಯೋಜನೆ: ಪ್ರವೀಣ್ ಕುಮಾರ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು,ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ, ಜ್ಞಾನ ವಿಕಾಸ ಮಹಿಳಾ ಮಂಡಲದ ಕಾರ್ಯಕ್ರಮ ಸುಳ್ಯ ತಾಲೂಕು ,ಪ್ರಗತಿಬಂಧು ಸ್ವಸಹಾಯ
ಸಂಘಗಳ ಒಕ್ಕೂಟ ಪಂಜ ವಲಯದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಡಿ.27 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು .
ಮುಖ್ಯ ಅತಿಥಿ ಸ್ಥಾನದಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿ ಮಾತನಾಡಿ ” ಮಕ್ಕಳು ಸಂಸ್ಕಾರ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಬೆಳೆದಾಗ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ. ಅವರನ್ನು ಈ ರೀತಿ ರೂಪಿಸಲು ತಾಯಿಯಂದಿರು ಮುಖ್ಯ ಕಾರಣರಾಗುತ್ತಾರೆ. ಆದ್ದರಿಂದ ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ” ಎಂದು ಹೇಳಿದರು.
ಶ್ರೀ ಕ್ಷೇತ್ರ. ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ (ರಿ) ದ.ಕ -02 ಜಿಲ್ಲೆ ,ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ” 42 ವರುಷಗಳ ಹಿಂದೆ ಕಷ್ಟಕರ ದಿನಗಳಲ್ಲಿ ಸಮಾಜದಲ್ಲಿ ಕಟ್ಟಕಡೆಯ ಜನರ ಬಾಳಿಗೆ ಬೆಳಕು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರು ಮಾಡಿರುವ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಹೇಳಿದರು.
ಕೂತ್ಕುಂಜ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಅಧ್ಯಕ್ಷೆ ಶ್ರೀಮತಿ ನಳಿನಿ ಸಭಾಧ್ಯಕ್ಷತೆ ವಹಿಸಿದ್ದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದ ಹೊಳೆ, ಪ್ರಗತಿ ಬಂಧು/ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ
ಸುರೇಶ್ ಕಣೆಮರಡ್ಕ, ಶ್ರೀ ಮಂಜುನಾಥೇಶ್ವರ ಭಜನಾ. ಪರಿಷತ್ ಪಂಜ ವಲಯ ಅಧ್ಯಕ್ಷ ಎಲ್ಯಣ್ಣ ಗೌಡ ಕಟ್ಟ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪಂಜ ವಲಯ ಅಧ್ಯಕ್ಷ
ಶಿವಪ್ರಸಾದ್ ಮಾದನಮನೆ,
ಪಂಜ ವಲಯ ಪ್ರ. ಬಂಧು ಸ್ವ-ಸಹಾಯ ಸಂಘಗಳ ವಲಯಾಧ್ಯಕ್ಷ ಧರ್ಮಪಾಲ ಕಣ್ಮಲ್, ಸುಳ್ಯದ ಪರ್ಫೆಕ್ಟ್ ಬ್ಯೂಟಿ ಪಾರ್ಲರ್ ಮತ್ತು ಲೇಡೀಸ್ ಟೈಲರ್ ಶ್ರೀಮತಿ ನಾಗರತ್ನ ದಯಾನಂದ,
ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ, ಚೊಕ್ಕಾಡಿ ಸಂಯೋಜಕಿ ಶ್ರೀಮತಿ ತ್ರಿವೇಣಿ,ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ನಾಟಿ ವೈದ್ಯೆ ಶ್ರೀಮತಿ ಬಾಲಕ್ಕ ಎಣ್ಣೆಮಜಲು, ಶೈಕ್ಷಣಿಕ ಸಾಧನೆಗೆ ಬಿಪಿನ್ ಏನೆಕಲ್ಲು, ವಿನುತಾ ಬಳ್ಪ ರವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಮನೋರಮಾ ಪೈಲಾರು ಯೋಜನೆಯಿಂದ ಪಡೆದ ಪ್ರಯೋಜನ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಆರಂಭದಲ್ಲಿ ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಾವತಿ, ನಾಗವೇಣಿ,ಶ್ರೀಮತಿ ವಿಮಲಾ ಪ್ರಾರ್ಥಿಸಿದರು. ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಸ್ವಾಗತಿಸಿದರು. ಮೇಲ್ವಿಚಾರಕಿ ಶ್ರೀಮತಿ ಕಲಾವತಿ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಲಕ್ಷ್ಮೀ ವಂದಿಸಿದರು.
ಬಳಿಕ ಕುಟುಂಬದ ಸಂಸ್ಕೃತಿ ಮತ್ತು ಸಂಸ್ಕಾರದ ಅನುಷ್ಠಾನದಲ್ಲಿ ಮಹಿಳೆಯರ ಪಾತ್ರ ವಿಚಾರ ಗೋಷ್ಠಿ ನಡೆಯಿತು .ಸಂಪನ್ಮೂಲ ವ್ಯಕ್ತಿಯಾಗಿ ವೇದ ಮತ್ತು ಕಲಾ ಪ್ರತಿಷ್ಠಾನ ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ನಾಗಾರಾಜ್ ಭಟ್ ಪಾಲ್ಗೊಂಡಿದ್ದರು.
ಸ್ವ ಉದ್ಯೋಗದ ಕುರಿತು ಸುಳ್ಯದ ಪರ್ಫೆಕ್ಟ್ ಬ್ಯೂಟಿ ಪಾರ್ಲರ್ ಮತ್ತು ಲೇಡೀಸ್ ಟೈಲರ್ ಶ್ರೀಮತಿ ನಾಗರತ್ನ ದಯಾನಂದ,ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ, ಚೊಕ್ಕಾಡಿ ಸಂಯೋಜಕಿ ಶ್ರೀಮತಿ ತ್ರಿವೇಣಿ ರವರು ಮಾಹಿತಿ ನೀಡಿದರು.