ಜೇಸಿಐ ವಲಯ 15 ರ ವಲಯಾಧಿಕಾರಿಯಾಗಿ ಲೋಕೇಶ್ ಆಕ್ರಿಕಟ್ಟೆ ಆಯ್ಕೆ

0


ಜೇಸಿಐ ಭಾರತದ ವಲಯ 15ರ ವಲಯಾಧಿಕಾರಿ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು, ಪೂರ್ವ ವಲಯಾಧಿಕಾರಿಗಳು ಆಗಿರುವ JFD.ಲೋಕೇಶ್ ಆಕ್ರಿಕಟ್ಟೆ ಮರು ಆಯ್ಕೆಗೊಂಡಿರುತ್ತಾರೆ. ಡಿಸೆಂಬರ್ 23 ರಂದು ಕುಂದಾಪುರದ ತೆಕ್ಕಟ್ಟೆಯ ಪ್ರೆಸಿಡೆಂಟ್ ಓಪನ್ ಪಾರ್ಕಿನಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ “ಸ್ಕಾಲರ್ಶಿಪ್ ಅಂಡ್ ವಾಯ್ಸ್ ಆಫ್ ಯೂತ್ “ ವಲಯ 15 ರ ಝೋನ್ ಕಾರ್ಡಿನೇಟರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಲಯ 15 ರಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸುಮಾರು 85 ಘಟಕಗಳಿಗೆ ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷ jc HGF ವಾಚಣ್ಣ ಕೆರೆಮೂಲೆ, ಖಜಾಂಜಿ JFM ಗಗನ್ ಕಿನ್ನಿಕುಮೇರಿ, ನಿರ್ದೇಶಕ JcHGF ಪ್ರವೀಣ್ ಕುಂಜತ್ತಾಡಿ ಉಪಸ್ಥಿತರಿದ್ದರು.