ಕಸ್ತೂರಿ ರಂಗನ್ ವರದಿ ವಿರೋಧಿಸಿ ಸುಳ್ಯದಲ್ಲಿ ಪ್ರತಿಭಟನೆ

0

ರೈತರ ಬದುಕಿಗಾಗಿ ಹೋರಾಟ : ಕಿಶೋರ್ ಶಿರಾಡಿ

ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನಾ ಸಭೆ ಜ.೧೮ರಂದು ಸುಳ್ಯ ವಲಯ ಅರಣ್ಯ ಇಲಾಖೆ ಕಛೇರಿ ಬಳಿ ನಡೆಯಿತು.

ಪ್ರತಿಭಟನೆಯನ್ನು ಉzಶಿಸಿ ಮಾತನಾಡಿದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, “ಇದು ರೈತರ ಬದುಕಿಗಾಗಿನ ಹೋರಾಟ. ವಿವಿಧ ಕಾನೂನುಗಳನ್ನು ತರುವ ಮೂಲಕ ರೈತರ ಮೌಲ್ಯಾಧಾರಿತ ಬದುಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಿ, ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು. ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು ಎಂದು ಅವರು ಒತ್ತಾಯಿಸಿದ ಅವರು, ನಮ್ಮ ಬದುಕಿಗಾಗಿ ಹೋರಾಟ ಅನಿವಾರ್ಯತೆ. ನಮಗೆ ನ್ಯಾಯ ಸಿಗುವ ತನಕ ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇವೆ. ಮುಂದಿನ ವರುಷ ಚಳಿಗಾಲದ ಅಧಿವೇಶನದ ಸಂದರ್ಭ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು” ಎಂದವರು ಹೇಳಿದರು.


ವೇದಿಕೆಯ ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು ಮಾತನಾಡಿ ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಾಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಹೇಳಿದರು. ಪ್ರಮುಖರಾದ
ಜಯಪ್ರಕಾಶ್ ಕೂಜುಗೋಡು, ಸಯ್ಯದ್ ಮೀರಾ ಸಾಹೇಬ್, ಹರಿಪ್ರಸಾದ್ ಪಾನತ್ತಿಲ, ತೀರ್ಥರಾಮ ನೆಡ್ಚಿಲ್, ಎ.ಜಿ.ಕರುಣಾಕರ, ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್, ಪುರುಷೋತ್ತಮ ಕೋಲ್ಚಾರ್, ಜಯಪ್ರಕಾಶ್ ಕೂಜುಗೋಡು, ಅಶೋಕ್ ಪೀಚೆ, ಚಿತ್ರಾ ಕುಮಾರಿ, ಅನಿಲ್ ಕೆ.ಸಿ. ಪರಿವಾರಕಾನ,, ಗೀತಾ ಕೋಲ್ಚಾರು, ದಾಮೋದರ ಮದುವೆಗದ್ದೆ, ಜನಾರ್ದನ ಚೊಕ್ಕಾಡಿ, ತೀರ್ಥರಾಮ ಕೆದಂಬಾಡಿ, ಚಂದ್ರಶೇಖರ ಬಾಳೆಕಜೆ, ವೇಣುಪ್ರಸಾದ್ ಪೆತ್ತಾಜೆ, ಪ್ರಸನ್ನ ಅಜ್ಜನಗದ್ದೆ, ಕೊರಗಪ್ಪ ಮಣಿಯಾಣಿ, ತಿಮ್ಮಯ್ಯ ಮೆತ್ತಡ್ಕ, ರಾಜರಾಮ ಪೆತ್ತಾಜೆ, ರವಿ ತೊಡಿಕಾನ, ಹುಕ್ರಪ್ಪ ನೆಡ್ಚಿಲು, ಧರ್ಮಪಾಲ ಕೊಯಿಂಗಾಜೆ, ವೆಂಕಟ್ರಮಣ ಕೆದಂಬಾಡಿ ಸಹಿತ ೬೦ ಕ್ಕೂ ಅಧಿಕ ಮಂದಿ ಪ್ರತಿಭಟನಾ ಸಭೆಯಲ್ಲಿದ್ದರು.


ಕಿಶೋರಿ ಶಿರಾಡಿ ಹಾಗೂ ಚಂದ್ರಶೇಖರರು ಮಾತನಾಡಿದ ಬಳಿಕ, ಅರಣ್ಯ ಇಲಾಖಾ ಕಚೇರಿ ಎದುರು ಹೋಗಿ, ರೇಂಜರ್ ಮಂಜುನಾಥ್‌ರಿಗೆ ಮನವಿ ಸಲ್ಲಿಸಿದರು.