ಅಜ್ಜಾವರ ಶಾಂತಿಮಜಲಿನ ಅನ್ವಿತ್ ಎಂಬ ಯುವಕ ಜ.22ರಂದು ನಾಪತ್ತೆಯಾಗಿದ್ದು ಇಂದು ಬೆಳಗ್ಗೆ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಅಡ್ಪಂಗಾಯ ಶಾಲೆಯ ವಿದ್ಯಾರ್ಥಿಯಾಗಿದ್ದ ಈತ ನಿನ್ನೆ ಶಾಲೆಗೆ ರಜೆ ಇದ್ದುದರಿಂದ ಮನೆಯಿಂದ ಆಟವಾಡಲೆಂದು ಬಂದಿದ್ದ. ಸಂಜೆ ಮನೆಗೆ ಹೋಗದಿದ್ದಾಗ ಮನೆಯವರಿಗೆ ಗಾಬರಿಯಾಗಿ ಹುಡುಕಾಟ ನಡೆಸಿ, ಪತ್ತೆಯಾಗದಿದ್ದಾಗ ಪೋಲೀಸರಿಗೆ ಮಾಹಿತಿ ನೀಡಿದರು.
ಇಂದು ಬೆಳಗ್ಗೆ ಮತ್ತೆ ಹುಡುಕಾಟ ಆರಂಭಿಸಿದಾಗ ಅಜ್ಜಾವರದಲ್ಲೇ ಅಂಗಡಿಯೊಂದರ ಪಕ್ಕದಲ್ಲಿ ಇದ್ದನೆಂದು ತಿಳಿದುಬಂದಿದೆ.