ಫೆ. 9: ಸುಳ್ಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ

0


ಸುಳ್ಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ‘ಜ್ಯುವೆಲ್ಸ್ ಗ್ರೂಪ್ ನೇತೃತ್ವದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಕಣಚೂರು ಆಸ್ಪತ್ರೆ ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ವಿಷನ್ ಚಾರಿಟೇಬಲ್ ಟ್ರಸ್ಟ್, ಪ್ರಣವ ಚಾರಿಟೇಬಲ್ ಟ್ರಸ್ಟ್ ಹಾಗೂ ಕ್ಯಾಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ ಫೆ. 9 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ಲಭ್ಯವಿದೆ.

ಶಿಬಿರದಲ್ಲಿ ಸ್ತ್ರೀಯರಿಗೆ ಮುಟ್ಟಿನ ಏರುಪೇರುಗಳ ಬಗ್ಗೆ ತಿಳುವಳಿಕೆ, ಮಹಿಳೆಯರಲ್ಲಿ ಕಂಡು ಬರುವ ಗರ್ಭಕೋಶದ ಕ್ಯಾನ್ಸರ್ ಅನ್ನು ಮುಂಜಾಗೃತವಾಗಿ ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು, ಪ್ಯಾಪ್‌ಸ್ಮಿಯರ್ ಉಚಿತವಾಗಿ ಮಾಡಲಾಗುವುದು. ಅಲ್ಲದೆ ಗಂಡಸರಿಗೆ ತಂಬಾಕು ಸೇವನೆಯಿಂದ ಹಾಗೂ ದುಷ್ಪರಿಣಾಮಗಳು, ಬಾಯಿ ಮತ್ತು ಗಂಟಲು ಸಮಸ್ಯೆಯಿಂದ ಬರುವ ಕ್ಯಾನ್ಸರ್‌ನ್ನು ಪ್ರಥಮ ಹಂತದಲ್ಲಿಯೇ ಕಂಡುಹಿಡಿದು ಅದಕ್ಕೆ ಬೇಕಾಗುವ ಚಿಕಿತ್ಸೆ ಮತ್ತು ಮಾಹಿತಿಯನ್ನು ನೀಡಲಾಗುವುದು.