ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘದ ಆಡಳಿತ ಮಂಡಳಿಗೆ ಚುನಾವಣೆ

0

ಗುತ್ತಿಗಾರು, ನಾಲ್ಕೂರು, ದೇವಚಳ್ಳ ಗ್ರಾಮಗಳನ್ನೊಳಗೊಂಡ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಸ್ಥಾನಗಳ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.11 ರಿಂದ ನಾಮಪತ್ರ ಆರಂಭವಾಗಲಿದೆ. ಫೆ.23 ಚುನಾವಣೆ ನಡೆದು ಅಂದೇ ಫಲಿತಾಂಶ ಘೋಷಣೆ ಆಗಲಿರುವುದಾಗಿ ವರದಿಯಾಗಿದೆ.

ಒಟ್ಟು 12 ನಿರ್ದೇಶಕರ ಆಯ್ಕೆ ನಡೆಯಲಿದ್ದು, ಸಾಮಾನ್ಯ ಸ್ಥಾನದಿಂದ 6, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಿಂದ ತಲಾ ಒಂದರಂತೆ ನಿರ್ದೇಶಕರು ಹಾಗೂ ಮಹಿಳಾ ಸ್ಥಾನದಿಂದ ಎರಡು ನಿರ್ದೇಶಕರ ಆಯ್ಕೆ ನಡೆಯಲಿದೆ.

ಫೆ.15 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಫೆ.16 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಫೆ. 17 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು ಅಂದು ಸಿಂಧುತ್ವ ಹೊಂದಿದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು ಅದೇ ದಿನ ಅಭ್ಯರ್ಥಿಗಳಿಗೆ ಚಿಹ್ನೆ ದೊರೆಯಲಿದೆ. ಫೆ.23 ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಗುತ್ತಿಗಾರು ಸೊಸೈಟಿಗೆ ಚುನಾವಣೆಯಲ್ಲಿ ಬಂಡಾಯ ಏಳುವ ಸೂಚನೆ ಇತ್ತಾದರೂ ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಡೆಯುವುದು ಬಹುತೇಕ ಖಚಿತವಾದಂತಿದೆ.