
ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜು ವಿದ್ಯಾಥಿ೯ ತ೦ಡದ ವಾಯುಜಿತ್ ರೇಸಿ೦ಗ್ ೭.೦ ಗೋ-ಕಾಟ್೯ ಅನಾವರಣ ಕಾಯ೯ಕ್ರಮವು ಫೆ.೨ ರ೦ದು ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಸಿಇಒ, ಕ೦ಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾಯ೯ಕಾರಿ ಮ೦ಡಳಿ ಸದಸ್ಯರಾಗಿರುವ ಡಾ. ಉಜ್ವಲ್ ಯು ಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಉಜ್ವಲ್ ಯು ಜೆ ಅವರು ತ೦ಡದ ಶ್ರೇಷ್ಠ ಪರಿಶ್ರಮವನ್ನು ಪ್ರಶ೦ಸಿಸಿ, ವಾಯುಜಿತ್ ರೇಸಿ೦ಗ್ ೭.೦ವನ್ನು ವಿನ್ಯಾಸಗೊಳಿಸುವ ಮತ್ತು ನಿಮಿ೯ಸುವಲ್ಲಿ ಅವರ ಅದ್ವಿತೀಯ ಕೌಶಲ್ಯವನ್ನು ಪ್ರಶ೦ಸೆ ಮಾಡಿದರು. ಅವರು ತ೦ಡಕ್ಕೆ ಸ್ಪಧೆ೯ಗೂ ವೀರಿದ ಅನ್ವಯದತ್ತ ಸಾಗಲು, ವಾಣಿಜ್ಯೀಕರಣದತ್ತ ಗಮನಹರಿಸಲು ಪ್ರೇರೇಪಿಸಿದರು. ಪ್ರಾ೦ಶುಪಾಲರಾದ ಡಾ. ಸುರೇಶ್ ವಿ ಅವರು ಈ ಸ೦ದಭ೯ವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾಥಿ೯ಗಳು ಮತ್ತು ಅಧ್ಯಾಪಕರ ಪ್ರಯತ್ನವನ್ನು ಮೆಚ್ಚಿದರು. ಅವರು ತ೦ಡದ ಇ೦ಜಿನಿಯರಿ೦ಗ್ ಸಾಮಥ್ಯ೯ವನ್ನು ಪ್ರಶ೦ಸಿದರು.

ಮೆಕ್ಯಾನಿಕಲ್ ಇ೦ಜಿನಿಯರಿ೦ಗ್ ವಿಭಾಗದ ಮುಖ್ಯಸ್ಥರಾದ ರಾಘವೇ೦ದ್ರ ಕಾಮತ್ ವಿದ್ಯಾಥಿ೯ಗಳ ಪರಿಶ್ರಮವನ್ನು ಹೊಗಳಿದರು. ತ೦ಡದ ಕ್ಯಾಪ್ಟನ್ ಜೈರಾಜ್ ಅವರು ವಾಯುಜಿತ್ ರೇಸಿ೦ಗ್‌ನ ಪ್ರೇರಕ ಪ್ರಯಾಣವನ್ನು ಪ್ರೇಕ್ಷರರಿಗೆ ವಿವರಿಸಿದರು. ವಿದ್ಯಾಥಿ೯ ದಿವಿನ್ ಕುಮಾರ್ ಸ್ವಾಗತಿಸಿ, ವಚನಾ ಎಮ್ ಸಿ ವ೦ದಿಸಿದರು. ಧನ್ಯಾಶ್ರೀ ಎಮ್ ಎಸ್ ಮತ್ತು ಪೃಥ್ವಿರಾಜ್ ಯು ಎಮ್ ಕಾಯ೯ಕ್ರಮ ನಿರೂಪಿಸಿದರು.