ಬೆಳ್ಳಾರೆ : ಒಡಿಯೂರು ಶ್ರೀ ಗ್ರಾಮ ವಿಕಾಸ ಕಚೇರಿ ಸ್ಥಳಾಂತರಗೊಂಡು ಉದ್ಘಾಟನೆ

0

ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನಾ ಕಚೇರಿ ಸ್ಥಳಾಂತರಗೊಂಡು ಫೆ.28 ರಂದು ಉದ್ಘಾಟನೆಗೊಂಡಿತು.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಒಡಿಯೂರು ಶ್ರೀ ವಿ.ವಿ.ಸೌ.ಸಹಕಾರಿಯ ವ್ಯವಸ್ಥಾಪಕರಾದ ಸಂತೋಷ್ ರೈ ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟಾರು ಸುಳ್ಯ ತಾಲೂಕು ಘಟಸಮೀತಿ ಅಧ್ಯಕ್ಷರಾದ ಸುಹಾಸ್ ಅಲೆಕ್ಕಾಡಿ, ಸುಳ್ಯ ತಾಲೂಕು ಘಟಸಮಿತಿಯ ಕಾರ್ಯದರ್ಶಿ ಸಂದೀಪ್ ಕುಮಾರ್, ಬೆಳ್ಳಾರೆ ವಲಯ ಸಂಯೋಜಕಿ ಶ್ರೀಮತಿಶೀಭಾ ಎಸ್ ರೈ, ಬೆಳ್ಳಾರೆ ವಲಯಾದ್ಯಕ್ಷರಾದ ಲೋಕೆಶ್ ನೆಟ್ಟಾರು, ಕೊಡಿಯಾಲ ಘಟಸಮೀತಿ ಅಧ್ಯಕ್ಷರಾದ ಸಚಿನ್ ಪಂಜಿಗಾರು, ಪಾಲ್ತಾಡು ಘಟಸಮೀತಿ ಅಧ್ಯಕ್ಷರಾದ ಪ್ರವೀಣ್ ಪಾಲ್ತಾಡು, ಹೆಗ್ಡೆ ಸಂಕೀರ್ಣದ ಮಾಲಕರಾದ ಉಮೇಶ್ ಹೆಗ್ಡೆ, ಬೆಳ್ಳಾರೆ ವಲಯ ಸೇವಾದೀಕ್ಷೀತರು ಹಾಗೂ ಐವರ್ನಾಡು, ಕೊಡಿಯಾಲ, ಪೆರುವಾಜೆ, ಬೆಳ್ಳಾರೆ, ಪಾಲ್ತಾಡು ಗ್ರಾಮದ ಪಧಾದಿಕಾರಿಗಳು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆಳ್ಳಾರೆ ವಲಯ ಸಂಯೋಜಕಿ ಶೀಭಾ ಎಸ್ ರೈ ಸ್ವಾಗತಿಸಿದರು.