ಗುತ್ತಿಗಾರಿನಲ್ಲಿ ವೈಭವದಿಂದ ನಡೆದ ಶ್ರೀ ಮುತ್ತಪ್ಪ ದೈವಸ್ಥಾನ ವಾರ್ಷಿಕ ಜಾತ್ರೋತ್ಸವ

0

ಗುತ್ತಿಗಾರಿನ ಶ್ರೀ ಮುತ್ತಪ್ಪ ದೈವಸ್ಥಾನ ಮುತ್ತಪ್ಪನಗರ ಇಲ್ಲಿನ ಶ್ರೀ ಮುತ್ತಪ್ಪ ತಿರುವಪ್ಪ ದೇವರ ವಾರ್ಷಿಕ ಜಾತೋತ್ಸವ ಮಾ..5 ಮತ್ತು ಮಾ.6 ರಂದು ನಡೆಯಿತು.

ಮಾ.5 ರ ಬೆಳಗ್ಗೆ ಶ್ರೀ ಗಣಪತಿ ಹವನ ನಡೆದಿದ್ದು ಸಂಜೆ ಶ್ರೀ ದೈವಕ್ಕೆ ಪೈಂಗುತ್ತಿ ನಡೆಯಿತು. ಬಳಿಕ ಶ್ರೀ ಮುತ್ತಪ್ಪ ದೇವರ ನೇಮ ನಡೆದು ಸೇವೆಗಳ ಪ್ರಸಾದ ವಿತರಣೆ ನಡೆಯಿತು. ರಾತ್ರಿ ಅನ್ನ ಸಂತರ್ಪಣೆ ನಡೆದಿದ್ದು ರಾತ್ರಿ ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳೆಕ್ಜಾಪಾಟ್ ನಡೆಯಿತು.


ಆ ಬಳಿಕ ಸಹಿಹಿತ್ಲು ಮೇಳದವರಿಂದ “ಕಲ್ಜಿಗದ ಸತ್ಯ” ತುಳು ಕಥಾನಕ ನಡೆಯಿತು . ಮಾ. 6 ರಂದ ಬೆಳಗ್ಗೆ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ ನಡೆದು ಪ್ರಸಾದ ವಿತರಣೆ ಬಳಿಕ ಶ್ರೀ ದೈವಕ್ಕೆ ವೆಳ್ಳಾಟಂ ನಡೆಯಿತು. ಮೊದಲ ದಿನ ರಾತ್ರಿ ನಿರೀಕ್ಷೆಗೂ ಮೀರಿ ಜನ ಭಾಗವಹಿಸಿದ್ದರು. ‌


ಆಡಳಿತ ಮಂಡಳಿ ಮೊಕ್ತೇಸರ ವೆಂಕಟ್ ವಳಲಂಬೆ, ಕಾರ್ಯದರ್ಶಿ ಮರಿಯಪ್ಪ ಮಾವಾಜಿ, ಪ್ರಧಾನ ಅರ್ಚಕ ಮೋಹನ್ ಕಡ್ತಲ್ ಕಜೆ, ಮೊಕ್ತೇಸರರಾದ ಚಂದ್ರಶೇಖರ ಕಂದಡ್ಕ ಭವಾನಿಶಂಕರ ಅಡ್ಡನಪಾರೆ, ದಯಾನಂದ ಮುತ್ಲಾಜೆ, ಚಂದ್ರಶೇಖರ ಪಾರೆಪ್ಪಾಡಿ, ಎ.ಬಿ ಮಾಧವ ಅಡ್ಕದಮನೆ, ಅನಿಲ್ ಕುಮಾರ್ ಅಚ್ಯುತ ಗುತ್ತಿಗಾರು, ಡಿ.ಆರ್ ಲಿಕೇಶ್ಬರ , ವಿನ್ಯಾಸ್ ಕೊಚ್ಚಿ, ಕಿಶೋರ್ ಕುಮಾರ್ ಬೊಮ್ಮದೇರೆ ಮತ್ತಿತರರು, ವಿವಿದ ಸಮಿತಿಯವರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.