
ಕುದ್ವ ಕುಟುಂಬದ ಶ್ರೀ ಉಳ್ಳಾಕುಲು,ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಎ.5,6,7 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಮಾ.13 ರಂದು ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ತರವಾಡು ಮನೆಯವರಾದ ಸೀತಾರಾಮ ಗೌಡ ಕುದ್ವ, ದೈವದ ಪರಿಚಾರಕರಾದ ಲೋಕನಾಥ ಕುದ್ವ ಪುತ್ತೂರು, ಗಿರೀಶ್ ಕುದ್ವ ಮತ್ತು ಕುದ್ವ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.