ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಯಶಸ್ವಿ ನಾಲ್ಕನೇ ವರ್ಷದ ಬೇಸಿಗೆ ಶಿಬಿರ ಚಿಣ್ಣರ ಕಲರವ -2025 ಉದ್ಘಾಟನಾ ಸಮಾರಂಭ

0

ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ನಾಲ್ಕನೇ ವರ್ಷದ ಬೇಸಿಗೆ ಶಿಬಿರ ಚಿಣ್ಣರ ಕಲರವ 2025- ಏಪ್ರಿಲ್ 1 ಮಂಗಳವಾದಂದು ಉದ್ಘಾಟನೆಗೊಂಡಿತು.

ರಂಗ ಕಲಾವಿದ ಜಯಪ್ರಕಾಶ್ ಮೊಂಟಡ್ಕ ಬಿಳಿನೆಲೆ ಇವರು ಬ್ಯಾನರ್ ಬಿಡುಗಡೆಗೊಳಿಸುವದರ ಮೂಲಕ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ., ಅಧ್ಯಕ್ಷ ಶುಭಕರ ಬಿ.ಸಿ. ಹಾಗೂ ಪೋಷಕರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಪೃಥ ಮತ್ತು ದ್ಯುತಿ ಪ್ರಾರ್ಥಿಸಿ, ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.