ವಾಹನ ಪಾರ್ಕಿಂಗ್ ವಿಷಯದ ಕುರಿತು ಎರಡು ತಂಡಗಳ ನಡುವೆ ಗಲಾಟೆ

0

ಪೊಲೀಸರ ಆಗಮನ, ಠಾಣೆಗೆ ಕರೆದೊಯ್ದು ವಿಚಾರಣೆ

ವಾಹನ ಪಾರ್ಕಿಂಗ್ ಮಾಡುವ ವಿಷಯದ ಕುರಿತು ಎರಡು ತಂಡದವರ ನಡುವೆ ಗಲಾಟೆ ಉಂಟಾಗಿ ಮಾಹಿತಿ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡು ಕಡೆಯವರನ್ನು ಠಾಣೆಗೆ ಕರೆ ದೊಯ್ದು ವಿಚಾರಣೆ ನಡೆಸಿರುವ ಘಟನೆ ಏಪ್ರಿಲ್ 20 ರಂದು ರಾತ್ರಿ ಕುರುಂಜಿ ಭಾಗ್ ಪರಿಸರದಲ್ಲಿ ನಡೆದಿದೆ.

ಪರಸ್ಪರ ಗಲಾಟೆ ಮಾಡಿಕೊಂಡವರು ಬಾಳಿಲ ಹಾಗೂ ಇನ್ನೊಂದು ತಂಡ ಸುಳ್ಯ ಮೂಲದವರು ಎಂದು ತಿಳಿದುಬಂದಿದೆ. ಮದ್ಯಪಾನ ಸೇವಿಸಿ ಕಿರಿಕಿರಿ ಮಾಡಿರುವ ಬಗ್ಗೆಯೂ ಹೇಳಲಾಗುತ್ತಿದೆ.