ಐವರ್ನಾಡಿನ ಕೆಎಫ್ ಡಿಸಿ ಪ್ಲಾಂಟೇಶನ್ ವಾಚರ್ ಪ್ರವೀಣ್ ಕುಮಾರ್ ಹೃದಯಾಘಾತದಿಂದ ಎ.21 ರಂದು ರಾತ್ರಿ ನಿಧನರಾದರು.
ಐವರ್ನಾಡಿನ ನಿಡುಬೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರಿಗೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಪರಿಣಾನ ಇವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಯಿತು.















ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 34 ವರ್ಷ ಪ್ರಾಯವಾಗಿತ್ತು.
ಮೂಲತ: ಮುಳ್ಳೇರಿಯದವರಾದ ಇವರು ಪತ್ನಿ, ಹಾಗು ಓರ್ವ ಪುತ್ರನನ್ನು ಅಗಲಿದ್ದಾರೆ. ಕೆಲ ವರ್ಷದಿಂದ ಇವರು ಪೆರಿಯಬಾಣೆ ರಬ್ಬರು ಘಟಕದಲ್ಲಿ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದರು.










