ಕ್ಯಾನ್ಸರ್ ಪೀಡಿತರಿಗಾಗಿ 3ವರ್ಷದಿಂದ ಬೆಳೆಸಿದ ತಲೆಕೂದಲು ದಾನ ಮಾಡಿದ ಮಿಥುನ್ ಕುಮಾರ್ ಸೋನ

0

ಕೊಲ್ಲಮೊಗ್ರದ ಯುವ ಕಲಾವಿದ ಮಿಥುನ್ ಕುಮಾರ್ ಸೋನ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸುಳ್ಯದ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಅಮೃತಕೇಶ ಕೂದಲು ದಾನ ಅಭಿಯಾನದ ಮೂಲಕ ಈ ಸೇವಾ ಕಾರ್ಯಕ್ಕೆ ಮೂಂದಾದ ಇವರು ಕಳೆದ ಮೂರು ವರ್ಷದಿಂದ ತನ್ನ ಕೂದಲನ್ನು ಕಲಾವಿದನಾಗಿ ಬೆಳೆಸಿ ಆರೈಕೆ ಮಾಡಿದ್ದು, ಅಮೃತಗಂಗಾ ಸಂಸ್ಥೆಯ ನಿರ್ವಾಹಕರಾದ ಉದಯ ಭಾಸ್ಕರ್ ಸುಳ್ಯ ಅವರ ಮೂಲಕ ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾರೆ.