⬆️ ಭಜನೆಯಿಂದ ಧರ್ಮ ರಕ್ಷಣೆ: ಶಿವರಾಮಯ್ಯ ಕರ್ಮಾಜೆ
⬆️ ಶಿಬಿರಾರ್ಥಿಗಳು ಉತ್ತಮ ಭಜಕರಾಗಿ: ರಮೇಶ್
⬆️ ತರಬೇತಿ ಶಿಬಿರ ಯಶಸ್ವಿಯಾಗಿದೆ: ವೆಂಕಟ್ರಮಣ ಆಚಾರ್ಯ

ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ)ಪಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು,ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ತಾಲೂಕು ಇದರ ಸಹಕಾರದಲ್ಲಿ 16ನೇ ವರ್ಷದ ಉಚಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ.4 ರಂದು
ನಡೆಯಿತು.

ಮುಖ್ಯ ಅತಿಥಿಯಾಗಿ ಪ್ರಗತಿ ಪರ ಕೃಷಿಕ ಶಿವರಾಮಯ್ಯ ಕರ್ಮಾಜೆ ಮಾತನಾಡಿ “ಮಕ್ಕಳನ್ನು ಉತ್ತಮ ಸಂಸ್ಕಾರಯುತವಾಗಿ ಬೆಳೆಸಿ ಅವರಿಗೆ ಧಾರ್ಮಿಕ ಅರಿವು ಮೂಡಿಸಿ. ಭಜನೆಯಿಂದ ಧರ್ಮ ರಕ್ಷಣೆ .ಆ ಮೂಲಕ ದೇಶದ ರಕ್ಷಣೆ ಆಗುತ್ತದೆ”. ಎಂದು ಅವರು ಹೇಳಿದರು
ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು ಸಭಾಧ್ಯಕ್ಷತೆ ವಹಿಸಿದ್ದರು.















ಮುಖ್ಯ ಅತಿಥಿಯಾಗಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಮೇಶ್ ಮಾತನಾಡಿ “ಭಜನಾ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮುಂದೆ ಉತ್ತಮ ಭಜಕರಾಗಿ. ಮುಂದಿನ ದಿನಗಳಲ್ಲಿ ಭಜನಾ ಮಂಡಳಿಗಳನ್ನು ಮುನ್ನಡೆಸಲು ಕಾರಣಿಕರ್ತರಾಗಿ”. ಎಂದು ಹೇಳಿದರು.
ಭಜನಾ ತರಬೇತುದಾರ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಮಾತನಾಡಿ “ಇಲ್ಲಿ ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆದಿದ್ದು ಭಜನಾ ತರಬೇತಿ ಶಿಬಿರ ಬಹಳಷ್ಟು ಯಶಸ್ವಿಯಾಗಿದೆ. ಭಜನೆಯಿಂದ ಪರಿಸರದಲ್ಲಿರುವ ದುಷ್ಟ ಶಕ್ತಿಗಳು ನಾಶವಾಗುತ್ತದೆ. ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು, ಮನೆಯವರು ಕೂಡ ಪಾಲ್ಗೊಂಡು ಪ್ರತಿ ದಿನ ಪ್ರತಿ ಮನೆಗಳಲ್ಲಿ ಭಜನಾ ಸಂಕೀರ್ತನೆ ನಡೆಯಲಿ.”ಎಂದು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪಂಜ ವಲಯ ಅಧ್ಯಕ್ಷ ಎಲ್ಯಣ್ಣ ಗೌಡ ಕಟ್ಟ, ಭಜನಾ ತರಬೇತಿ ಸಂಚಾಲಕ ಲೋಕೇಶ್ ಬರೆಮೇಲು, ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ತರಬೇತಿದಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಮುಖ್ಯ ತರಬೇತುದಾರದ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಮತ್ತು ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ ದಂಪತಿಗಳನ್ನು ಸನ್ಮಾನಿಸಲಾಯಿತು.
ತರಬೇತಿ ಪಡೆದ ವಿದ್ಯಾರ್ಥಿಗಳು ಶಿಬಿರದ
ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಉಷಾ ಉಬರಡ್ಕ, ಮಹಾಲಿಂಗ ಸಂಪ, ವಿಶ್ವನಾಥ ರೈ ಅರ್ಗುಡಿ ತರಬೇತುದಾರರಾಗಿ ಸಹಕರಿಸಿದರು.
70 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪ್ರತೀ ದಿನ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗುರುಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ನಾರಾಯಣ ಶಿರಾಜೆ ವಂದಿಸಿದರು. ಭಜನಾ ಮಂಡಳಿ ಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ ಸಹಕರಿಸಿದರು. ಮುಂಜಾನೆ ಶ್ರೀ ಸತ್ಯನಾರಾಯಣ ದೇವರ ಪೂಜೆ ಆರಂಭ ಗೊಂಡು ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಮುಂಜಾನೆ ಅರ್ಧ ಏಕಾಹ ಭಜನೆ ಆರಂಭ ಗೊಂಡು ಸೂರ್ಯಾಸ್ತಮಾನದ ತನಕ ನಡೆಯಿತು.ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು.










