ಪಂಜದ ಕಂರ್ಬು ಪೂಜಾರಿಮನೆ ಎಂಬಲ್ಲಿರುವ ಮೂರು ಊರಿನ ( ಕಂರ್ಬು-ಅಳ್ಪೆ-ಕಂಡೂರು ಕೂಡುಕಟ್ಟು)
ಶ್ರೀ ಶಿರಾಡಿ ರಾಜನ್ ದೈವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ಮೇ.8 ರಿಂದ ಮೇ.9 ರ ತನಕ
ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೇ.11 ರಿಂದ ಮೇ.12 ತನಕ ನೇಮೋತ್ಸವ
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.















ಮೇ. 8 ರಂದು ಸಂಜೆ ಗಂಟೆ 6.30ರಿಂದ : ದೇವತಾ ಪ್ರಾರ್ಥನೆ, ಆಚಾರ್ಯವರಣೆ,
ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಬಿಂಬ ಜಲಾಧಿವಾಸ, ಪ್ರಾಕಾರ ದಿಕ್ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ.9 ರಂದು ಪೂರ್ವಾಹ್ನ ಗಂಟೆ 7 ರಿಂದ ಮಹಾಗಣಪತಿ ಹೋಮ,ಪಂಚವಿಂಶತಿ ಕಲಶ ಪೂಜೆ, ದಿವಾ ಗಂಟೆ 9.46ರಿಂದ 10.43ರ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಶಿರಾಡಿ ರಾಜನ್ ದೈವ, ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ,ಶ್ರೀ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮೇ.11 ರಂದು ರಾತ್ರಿ ಗಂಟೆ 7.45-8.00ರ ತನಕ ನಡೆಯುವ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು. ಮೇ.11 ರಂದು ರಾತ್ರಿ 7.45 ಕ್ಕೆ ಭಂಡಾರ ತೆಗೆದು, ಅನ್ನಸಂತರ್ಪಣೆ, ಪರಿವಾರ ದೈವಗಳ ನೇಮ ನಡೆಯಲಿದೆ.
ಮೇ. 12 ರಂದು ಬೆಳಿಗ್ಗೆ ಗಂಟೆ 7 ರಿಂದ ಶ್ರೀ ಶಿರಾಡಿ ರಾಜನ್ ದೈವ ನೇಮೋತ್ಸವ, ಮಧ್ಯಾಹ್ನ ಗಂಟೆ 12ರಿಂದ :ಕೈ ಕಾಣಿಕೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.










