ಭಾರತದ ಎರಡನೇ ಅತಿ ದೊಡ್ಡ ಕಂಟೈನರ್ ಬಂದರು ಎಂದು ಕರೆಯಲ್ಪಡುವ ಮುಂಬೈಯ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಅಥಾರಿಟಿ (JNPA) ಯ ಗ್ರೀನ್ ಚಾಂಪಿಯನ್ ಅವಾರ್ಡ್ ಗೆ ಗ್ರೀನ್ ಹೀರೋ ಆಪ್ ಇಂಡಿಯಾ ಡಾ. ಆರ್.ಕೆ. ನಾಯರ್ ಭಾಜನರಾಗಿದ್ದಾರೆ.















ಮಿಯಾವಕಿ ಅರಣ್ಯ ದ ಮೂಲಕ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಕಾರಣಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಮೇ. 26 ರಂದು ನಡೆಯಲಿರುವ ಸಂಸ್ಥೆಯ 36 ನೇ ವಾರ್ಷಿಕ ದಿನಾಚರಣೆ ಸಂದರ್ಭ ಬಂದರು, ಹಡಗು ಯಾನ ಮತ್ತು ಜಲಯಾನ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.










