2023-24ನೇ ಸಾಲಿನಲ್ಲಿ ರೀಜನ್ ಚೇರ್‌ಪರ್ಸನ್ ಆಗಿದ್ದ ಲ. ರೇಣುಕಾ ಸದಾನಂದ ಜಾಕೆಯವರ ಸೇವೆಯನ್ನು ಗುರುತಿಸಿ ಮಲ್ಟಿಪಲ್ ಡಿಸ್ಟ್ರಿಕ್ಟ್ ಅವಾರ್ಡ್ “ಬೆಸ್ಟ್ ರೀಜನ್ ಚೇರ್‌ಪರ್ಸನ್” 2023-24 ಪುರಸ್ಕಾರವನ್ನು ಮೇ. 18ರಂದು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯ ಮುಕ್ತಗಂಗೋತ್ರಿಯ ಕನ್ವೆನ್ಷನ್ ಹಾಲ್‌ನಲ್ಲಿ 7 ಲಯನ್ಸ್ ಜಿಲ್ಲೆಯನ್ನೊಳಗೊಂಡ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ರ 16ನೇ ಕನ್ವೆನ್ಷನ್ ಸಮಾರಂಭದಲ್ಲಿ ನೀಡಲಾಯಿತು.
2023-24 ನೇ ಸಾಲಿನ ಮಲ್ಟಿಪಲ್ ಕೌನ್ಸಿಲ್ ಚೇರ್‌ಮೆನ್ ಲ. ಬಿ.ಎಸ್.ರಾಜಶೇಖರಯ್ಯ ಇವರು ಪ್ರಶಸ್ತಿ ವಿತರಿಸಿದರು.















ಈ ಸಂದರ್ಭದಲ್ಲಿ ಮಾಜಿ ಇಂಟರ್‌ನ್ಯಾಷನಲ್ ಡೈರೆಕ್ಟರ್ ಲ. ಕೆ.ವಂಶಿಧರ್ ಬಾಬು, ಮಲ್ಟಿಪಲ್ ವೈಸ್‌ಚೇರ್‌ಮೆನ್ ಲ. ಸುರೇಶ್ ರಾಂ, ನಿಕಟಪೂರ್ವ ಜಿಲ್ಲಾ ಗವರ್ನರ್ ಲ. ಡಾ.ಮೆಲ್ವಿನ್ ಡಿಸೋಜಾ ಪಿಎಂಜೆಎಫ್, ಪ್ರಸ್ತುತ ಗವರ್ನರ್ ಲ. ಭಾರತಿ ಪಿಎಂಜೆಫ್ ಉಪಸ್ಥಿತರಿದ್ದರು.
ಶ್ರೀಮತಿ ರೇಣುಕಾ ಸದಾನಂದ ಜಾಕೆಯವರು 2001-02ರಲ್ಲಿ ಫಸ್ಟ್ ಬೆಸ್ಟ್ ಲಯನೆಸ್ ಪ್ರೆಸಿಡೆಂಟ್, 2004-05 ರಲ್ಲಿ ಲಯನೆಸ್ ಆಫ್ ದ ಇಯರ್, 2016-17 ರಲ್ಲಿ ಫಸ್ಟ್ ಬೆಸ್ಟ್ ಲಯನ್ ಪ್ರೆಸಿಡೆಂಡ್, ಹಾಗೂ ಈಬಾರಿ ಬೆಸ್ಟ್ ರೀಜನ್ ಚೇರ್ ಪರ್ಸನ್ ಆಗಿ ನಾಲ್ಕು ಬಾರಿ ಮಲ್ಟಿಪಲ್ ಡಿಸ್ಟ್ರಿಕ್ಟ್‌ನಿಂದ ಪುರಸ್ಕಾರವನ್ನು ಪಡೆದಿದ್ದಾರೆ.










