ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಗ್ರಾಮೀಣ ಭಾಗದ ವಿದ್ಯಾರ್ಥಿ
ಈ ಬಾರಿಯ 2024-25 ನೇ ಸಾಲಿನ ಪರೀಕ್ಷೆ ಬರೆದ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶಿಶಿರ. ಬಿ. ಎಸ್. ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದಿರುತ್ತಾರೆ.
















ಕನ್ನಡ ಹಾಗೂ ಹಿಂದಿ ವಿಷಯಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಹಿಂದಿಯಲ್ಲಿ 99 ಅಂಕಗಳಿಗೆ 1 ಅಂಕ ಸೇರ್ಪಡೆಯಾಗಿ 100ರಲ್ಲಿ 100, ಕನ್ನಡದಲ್ಲಿ 122 ಅಂಕಗಳಿಗೆ 3 ಅಂಕ ಸೇರಿ 125ಕ್ಕೆ 125 ಅಂಕಗಳನ್ನು ಪಡೆದು 624 ಅಂಕ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶಿಶಿರ್ ಬಿ. ಎಸ್. ಗುತ್ತಿಗಾರು ಗ್ರಾಮದ ವಳಲಂಬೆ ಗುಂಡಿಮಜಲು ಮನೆ ಬಿ. ಕೆ. ಶ್ರೀಕೃಷ್ಣ ಮತ್ತು ಶಾಲಿನಿ ದಂಪತಿಗಳ ಪುತ್ರ.
ಇದರೊಂದಿಗೆ ಸುಳ್ಯ ತಾಲೂಕಿನ ಮೂರು ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗುವಂತಾಗಿದೆ.










