ಬೂಡು ದೈವಸ್ಥಾನದ ಬಳಿ ಬಾವಿ ಕಾಮಗಾರಿ ಪೂರ್ತಿಗೊಳಿಸಲು ಅನುದಾನ

0

ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್

ಸುಳ್ಯ‌ ನಗರದ ಬೂಡು ದೈವಸ್ಥಾನದ ಎದುರು ತೆಗೆಯಲಾಗಿರುವ ಬಾವಿ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಅದನ್ನು ಪೂರ್ತಿಗೊಳಿಸಲು ಅನುದಾನ ಇರಿಸಲು ನಿರ್ಧರಿಸಲಾಗಿದೆ ಎಂದು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.

ಬೂಡು ದೈವಸ್ಥಾನದ ಎದುರು ನ.ಪಂ. ಅನುದಾನ ರೂ.1 ಲಕ್ಷದ 50 ಸಾವಿರದಲ್ಲಿ ಬಾವಿ ಕೆಲಸ ಮಾಡಲಾಗಿತ್ತು. ಆದರೆ ಕೆಲಸ ಪೂರ್ತಿಯಾಗಿರಲಿಲ್ಲ. ಅರ್ಧದಲ್ಲಿ ಬಾವಿ ಕೆಲಸ ನಿಂತಿರುವುದರಿಂದ ಮತ್ತು ದೈವಸ್ಥಾನದ ಎದುರೇ ಬಾವಿ ತೋಡಿದ್ದರಿಂದ ಅಪಾಯ ಸಂಭವಿಸುವ ರೀತಿಯಲ್ಲಿದೆ. ಶಾಸಕರ ಸೂಚನೆ ಮೇರೆಗೆ ನ.ಪಂ. ಅಧ್ಯಕ್ಷರು ಅನುದಾನ ಇರಿಸಿದ್ದು, ಬಾವಿ ಕಾಮಗಾರಿ ಪೂರ್ತಿ ಮಾಡುವಂತೆ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ನ.ಪಂ. ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದರು. ಬೂಡು ನಿವಾಸಿಗಳು ಕೂಡಾ ಬಾವಿ ಕೆಲಸ ಪೂರ್ತಿ ಮಾಡುವಂತೆ ನ.ಪಂ.ನ್ನು ಒತ್ತಾಯಿಸಿದ್ದರು.

ಅನುದಾನ ಇರಿಸಲಾಗುವುದು

ನ.ಪಂ. ವತಿಯಿಂದ 20 ವಾರ್ಡ್ ಗಳಿಗೂ ಅನುದಾನ ನೀಡಲಾಗುತಿದ್ದು, ಬೂಡು ವಾರ್ಡ್ ಗೆ ಬರುವ ಅನುದಾನದಲ್ಲಿ ಒಂದಷ್ಟು ಮೊತ್ತ ಇರಿಸಿ ಬೂಡಿ ದೈವಸ್ಥಾನದ ಎದುರು ತೋಡಲಾಗಿರುವ ಬಾವಿ ಕಾಮಗಾರಿ ಪೂರ್ತಿ ಮಾಡಲಾಗುವುದು ಎಂದು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.