ಎಸ್. ಎಸ್. ಎಲ್. ಸಿ. ಮರು ಮೌಲ್ಯಮಾಪನದಲ್ಲಿ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನನ್ ಗೆ 601 ಅಂಕ

0

ಈ ಬಾರಿಯ 2024-25 ನೇ ಸಾಲಿನ ಪರೀಕ್ಷೆ ಬರೆದ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಮನನ್ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ ನಾಲ್ಕು ಅಂಕ ಪಡೆದು ಇದೀಗ 601 ಅಂಕ ಪಡೆದಿದ್ದಾರೆ.

ಕಳೆದ ಬಾರಿ ಪಲಿತಾಂಶ ಘೋಷಣೆಯಾದಾಗ 597 ಅಂಕ ಪಡೆದಿದ್ದ ಮನನ್, ಸಮಾಜ ವಿಜ್ಞಾನ ವಿಷಯದಲ್ಲಿ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ ನಾಲ್ಕು ಅಂಕ ಪಡೆದು ಇದೀಗ ಒಟ್ಟು 601 ಅಂಕ ಪಡೆದಿದ್ದಾರೆ.

ಮನನ್ ರವರು ಅಮರಮುಡ್ನೂರು ಗ್ರಾಮದ ಪ್ರವೀಣ್ ಚಿಲ್ಪಾರು ಮತ್ತು ಸವಿತಾ ದಂಪತಿಗಳ ಪುತ್ರ.