
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ದುಗ್ಗಲಡ್ಕದ ಕೊಳೆಂಜಿಕೋಡಿಯಲ್ಲಿ ಮನೆ ಬದಿಯ ಕಾಂಪೌಂಡ್ ಕುಸಿದು ಅಪಾರ ನಷ್ಟ ಸಂಭವಿಸಿದೆ.















ಇಂದು ಬೆಳಿಗ್ಗೆ ಸುರಿದ ಭಾರಿ ಮಳೆಗೆ ಕೊಳೆಂಜಿಕೋಡಿ ಅಬ್ದುಲ್ಲ ಎಂಬವರ ಮನೆ ಬದಿಯ ಸುಮಾರು 20 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದೆ. ಕಾಂಪೌಂಡ್ ನ ಕಲ್ಲು, ಮಣ್ಣು ಕೆಳಗಿನ ಮನೆಯ ಹನೀಫ್ ಎಂಬವರ ಮನೆಯ ಮೇಲೆ ಬಿದ್ದುದರಿಂದ ಆ ಮನೆಗೂ ಹಾನಿಯಾಗಿದೆ. ಹನೀಫ್ ರವರ ಮನೆಯ ಕಿಟಕಿಯ ಗಾಜು ಹುಡಿಯಾಗಿದ್ದು, ಗೋಡೆಗೂ ಹಾನಿಯಾಗಿದೆ.










