ಕನಕಮಜಲು ಗ್ರಾ.ಪಂ. ಉಪಚುನಾವಣೆ: ಶೇ.61.51 ಮತದಾನ ಮೇ.28 ರಂದು ಮತ ಎಣಿಕೆ

0

ಕನಕಮಜಲು ಗ್ರಾಮ ಪಂಚಾಯತ್ ನಿಂದ ತೆರವಾದ ಒಂದು ಸ್ಥಾನಕ್ಕೆ ಮೇ.25 ರಂದು ಉಪಚುನಾವಣೆ ನಡೆದಿದ್ದು, ಶೇ.61.51 ಮತದಾನವಾಗಿದೆ.
ಕನಕಮಜಲು ಗ್ರಾ.ಪಂ. ಸದಸ್ಯರಾಗಿದ್ದ ರವಿಚಂದ್ರ ಕಾಪಿಲರು ಅಸೌಖ್ಯದಿಂದ ನಿಧನರಾಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಒಟ್ಟು 515 ಪುರುಷರು ಹಾಗೂ 571 ಮಹಿಳಾ ಮತದಾರರು ಸೇರಿ ಒಟ್ಟು 1086 ಮತಗಳಿದ್ದವು. ಅದರಲ್ಲಿ 31೦ ಪುರುಷರು ಹಾಗೂ ೩೫೪ ಮಹಿಳೆಯರು ಮತದಾನ ಮಾಡಿದ್ದು ಒಟ್ಟು 61.51 ಮತದಾನವಾಗಿದೆ. ಕನಕಮಜಲು ಶಾಲೆ ಮತದಾನ ಕೇಂದ್ರವಾಗಿದ್ದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡು ಸಂಜೆ ೫ ಗಂಟೆ ತನಕ ನಡೆಯಿತು.


ಮೇ.28 ರಂದು ಬೆಳಗ್ಗೆ 7 ಗಂಟೆಯಿಂದ ಮತ ಎಣಿಕೆ ನಡೆದು ಫಲಿತಾಂಶ ಹೊರ ಬರಲಿದೆ ಎಂದು ಎಂದು ಚುನಾವಣಾಧಿಕಾರಿ ಸುಳ್ಯ ಬಿ.ಇ.ಒ. ಕಚೇರಿಯ ಅಧೀಕ್ಷಕರಾಗಿರುವ ಶಿವಪ್ರಸಾದ್ ತಿಳಿದುಬಂದಿದೆ.