ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಪಳನಿವೇಲು ಕೆ.ಎಂ. ಕರ್ತವ್ಯಕ್ಕೆ ಹಾಜರು

0

ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಆಗಿ ಪಳನಿ ವೇಲು ಕೆಎಂ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುತ್ತಾರೆಮೂಲತ ದುಗಲಡ್ಕ ನಿವಾಸಿ ದಿವಂಗತ ಮುತ್ತು ಸ್ವಾಮಿ ಹಾಗೂ ದಿವಂಗತ ಧನ್ಯ ಭಾಗ್ಯಂ ರವರ ಪುತ್ರ ರಾಗಿರುವ ಇವರು ಪ್ರಸ್ತುತ ಕಾರ್ಕಳದ ನಿಟ್ಟೆಯಲ್ಲಿ ವಾಸಿಸುತ್ತಿದ್ದಾರೆ.

ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಹೈವೇ ಸ್ಕ್ವಾಡ್,ಬಂಟ್ವಾಳ ನಗರ ಠಾಣೆ, ಸುಬ್ರಹ್ಮಣ್ಯ ಪುತ್ತೂರು ಟ್ರಾಫಿಕ್, ಡಿಸಿಐಬಿ ಮಂಗಳೂರು ಸಿಇಎನ್ ಮಂಗಳೂರು ಹೀಗೆ ಇಲಾಖೆಯಲ್ಲಿ ಬೇರೆ ಬೇರೆ ಹುದ್ದೆಗಳನ್ನು ಮಾಡಿರುತ್ತಾರೆ.