ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವತಿಯಿಂದ ಬೆಳ್ಳಾರೆ ಶ್ರೀಮತಿ ಮಹಾಲಕ್ಷ್ಮೀ ಎನ್.ಭಟ್ ರವರಿಗೆ ಸನ್ಮಾನ

0
   ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ  ಸುಳ್ಯ ಇದರ ಬೆಳ್ಳಾರೆ ವಲಯದ ಆಶ್ರಯದಲ್ಲಿ   ಡಾl ಯಸ್ ನಾರಾಯಣ ಭಟ್ ರವರ ಪತ್ನಿ ಶ್ರೀಮತಿ ಮಹಾಲಕ್ಷ್ಮೀ ಯನ್. ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮವು  ಅವರ ನಿವಾಸದಲ್ಲಿ ಮೇ.28 ರಂದು ನಡೆಯಿತು.
    ಪ್ರಸ್ತುತ ಬೆಳ್ಳಾರೆಯಲ್ಲಿ ' ಅನುಪಮಾ ಮೆಡಿಕಲ್ಸ್ ' ನ ಮಾಲಕರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡು ವಯೋ ನಿವೃತ್ತಿ ಯ ಕಾರಣಗಳಿಂದ ಮೆಡಿಕಲ್ಸ್ ನ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸಿ ,ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಅಧ್ಯಕ್ಷ  

ಬಿ.ಸುಬ್ರಹ್ಮಣ್ಯ ಜೋಶಿ ಹಾಗೂ ಶ್ರೀಮತಿ ಶ್ಯಾಮಲಾ ಯಸ್ ಜೋಶಿ ಯವರು ಶಾಲು, ಹಾರ ಹಾಕಿ ಗೌರವಿಸಿ ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿಯವರು ಕೀರ್ತಿ ಶೇಷ ಡಾl ಯಸ್ ನಾರಾಯಣ ಭಟ್ ರವರು 1976 ರಿಂದ ಬೆಳ್ಳಾರೆಯಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿ ಬೆಳ್ಳಾರೆ ಹಾಗೂ ಅದರ ಪರಿಸರದ ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ಅವಿರತವಾಗಿ ನಡೆಸಿಕೊಂಡು ಬಂದಿದ್ದು ,ಅವರ ಅನನ್ಯ ಸೇವೆಯಲ್ಲಿ ಅವರ ಧರ್ಮಪತ್ನಿ ಯವರು ನಿರಂತರವಾಗಿ ಕೈಜೋಡಿಸಿದ್ದು,ಇವರ ಅನುಪಮ ಸೇವೆಯನ್ನು ಬೆಳ್ಳಾರೆ ಹಾಗೂ ಪರಿಸರದ ಜನತೆ ಎಂದಿಗೂ ಮರೆಯುವಂತಿಲ್ಲ.
ವೈದರ ಅಗಲುವಿಕೆಯ ನಂತರವೂ ಮಗ ಯಸ್ ಮುರಳೀಧರ್ ರವರ ಸಹಕಾರದಲ್ಲಿ ಈ ಊರಿಗೆ ಉಚಿತ ಆಂಬುಲೆನ್ಸ್ ಸೇವೆಯನ್ನು ನೀಡಿ ನಿರ್ವಹಿಸಿಕೊಂಡು ಬರುತ್ತಿದ್ದು ,ಇವರ ಜನ ಸೇವೆ ಅಪ್ರತಿಮವಾದುದು ಎಂದು ಶ್ಲಾಘಿಸಿದರು.
ಸಭೆಯ ಅಧ್ಯಕ್ಷತೆಯನ್ನು ,ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸುಳ್ಯದ ಅಧ್ಯಕ್ಷ ಹರಿಶ್ಚಂದ್ರ ವಹಿಸಿದ್ದರು ಹಾಗೂ ಇನ್ನೋರ್ವ ಅತಿಥಿ ,ಸನ್ಮಾನಿತರ ಸಹೋದರ ಶಂಕರನಾರಾಯಣ ಭಟ್ ಆಲಂಗಾರು ಶುಭ ಹಾರೈಸಿದರು .
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ,ದಿಲೀಪ್ ಗಟ್ಟಿಗಾರು, ಸಿದ್ಧಿ ಎಲೆಕ್ಟ್ರಿಕಲ್ಸ್ ನ ರಾಮ ಜೋಯಿಸ, ಪ್ರಶಾಂತ್ ಕಾವಿನಮೂಲೆ , ಇನ್ನಿತರು ಶುಭಹಾರೈಸಿದರು.
ಸಂಘದ ಉಪಾಧ್ಯಕ್ಷ ವಸಂತ ಬೋರ್ಕರ್ ರವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ,ವಂದನಾರ್ಪಣೆ ಗೈದರು. ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.