ವಕ್ಫ್ ಮಾಜಿ ಕೌನ್ಸಿಲರ್ ಎಸ್ ಸಂಶುದ್ದೀನ್ ರವರಿಂದ ಪೂರ್ಣ ಪ್ರಯತ್ನ
ಕರ್ನಾಟಕ ಸರ್ಕಾರದ ವಕ್ಫ್ ಬೋರ್ಡ್ ನಿಂದ ಸುಳ್ಯ ಅಂಬಟೆಡ್ಕ ಇಕ್ರಾ ಮಸೀದಿ ಹಾಗೂ ಸಂಪಾಜೆ ಮಸೀದಿಗೆ ತಲಾ ರೂ 5 ಲಕ್ಷ ರೂಪಾಯಿ ಮಂಜೂರು ಆಗಿ ಬಂದಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಸದಸ್ಯರಾದ ಎಸ್ ಸಂಶುದ್ದೀನ್ ತಿಳಿಸಿರುತ್ತಾರೆ.
















ಸುಳ್ಯಕ್ಕೆ ರಾಜ್ಯ ವಕ್ಫ್ ಬೋರ್ಡ್ ನಿಂದ 2025 ಸಾಲಿನ ಮೊದಲ ಅನುದಾನ ಇದಾಗಿದ್ದು ಈ ಮೊದಲು ತಾಲೂಕಿನ ಅನೇಕ ಮಸೀದಿ ಮದ್ರಸ ಗಳಿಗೆ ಸರಕಾರದಿಂದ ವಕ್ಫ್ ಇಲಾಖೆ ಮೂಲಕ ಅನುಧಾನ ತರಿಸಲಾಗಿದೆ ಎಂದು ಸುದ್ದಿಗೆ ಅವರು ತಿಳಿಸಿದರು.










