ನೂತನ ಡಿ.ಸಿ. ದರ್ಶನ್ ಎಚ್.ವಿ.
ಮಳೆಗಾಲದಲ್ಲಿ ಆಗಾಗ ಮಳೆಯ ಕಾರಣಕ್ಕಾಗಿ ಶಾಲೆಗೆ ರಜೆ ಕೊಡುತ್ತಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿ ಎನಿಸಿದ್ದ ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ರವರು ವರ್ಗಾವಣೆಗೊಂಡಿದ್ದಾರೆ.
ಕರ್ನಾಟಕ ರಾಜ್ಯ ನೋಂದಾವಣಾ ಇಲಾಖೆಯ ಇನ್ ಸ್ಪೆಕ್ಟರ್ ಜನರಲ್ ಹಾಗೂ ಕಮಿಷನರ್ ಆಫ್ ಸ್ಟಾಂಪ್ಸ್ ಆಗಿ ಅವರನ್ನು ರಾಜ್ಯ ಸರಕಾರ ವರ್ಗಾಯಿಸಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಅಡಿಶನಲ್ ಕಮಿಷನರ್ ಆಗಿರುವ ಐ.ಎ.ಎಸ್. ಅಧಿಕಾರಿ ದರ್ಶನ್ ಎಚ್.ವಿ. ಯವರು ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶವಾಗಿದೆ.

























