ದೊಡ್ಡಪ್ಪನ ಮಗನಿಂದಲೇ ಗರ್ಭದಾನ

0

ಪೋಕ್ಸೋ ಕೇಸು ದಾಖಲು : ಆರೋಪಿಯ ಬಂಧನ

15 ವರ್ಷದ ಹುಡುಗಿಗೆ 18 ತುಂಬದ ಹುಡುಗ ಗರ್ಭದಾನ ಮಾಡಿರುವ ಘಟನೆ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಿಂದ ವರದಿಯಾಗಿದೆ.
ಹುಡುಗ ಆ ಹುಡುಗಿಯ ದೊಡ್ಡಪ್ಪನ ಮಗನೆಂದು ಹೇಳಲಾಗುತ್ತಿದ್ದು, ಐದು ತಿಂಗಳ ಬಸುರಿಯಾಗಿರುವ ಆಕೆ ಇಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ವಿಷಯ ತಿಳಿದು ಪೋಲೀಸರಿಗೆ ತಿಳಿಸಲಾಯಿತು.
ಪ್ರಕರಣ ದಾಖಲಿಸಿಕೊಂಡ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.