ಅಧ್ಯಕ್ಷ :ಪ್ರಕಾಶ್ ನರಿಯಂಗ, ಕಾರ್ಯದರ್ಶಿ ನಿರ್ಮಲಾ ಎಸ್ ಪಲ್ಲೋಡಿ, ಕೋಶಾಧಿಕಾರಿ: ನಾಗಪ್ಪ ಗೌಡ ಪಂಜದಬೈಲು, ಉಪಾಧ್ಯಕ್ಷ :ಲಕ್ಷ್ಮಣ ಸಂಕಡ್ಕ, ಜೊತೆ ಕಾರ್ಯದರ್ಶಿಯಾಗಿ ಯತೀಶ್ ಕಟ್ಟೆಮನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಪಂಜ ವಲಯದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷ ಎಲ್ಯಣ್ಣ ಗೌಡ ಕಟ್ಟ ರವರ ಅಧ್ಯಕ್ಷತೆಯಲ್ಲಿ ಪಂಜ ಶ್ರೀ ಶಾರದಾಂಬಾ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.
ತಾಲ್ಲೂಕು ಭಜನಾ ಪರಿಷತ್ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ಹಾಗೂ ರಾಜ್ಯ ಭಜನಾ ಪರಿಷತ್ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ರಾಜ್ಯ ಭಜನಾ ಪರಿಷತ್ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ ಮಾತನಾಡಿ “ಪೂಜ್ಯ ಖಾವಂದರ ಕನಸಾದ ಮನೆ ಮನೆಯಲ್ಲಿ, ಹಳ್ಳಿ ಹಳ್ಳಿಯಲ್ಲಿ ಭಜನೆ ಮಾಡುವಂತೆ ಮಾಡುವ ” ಹೇಳಿದರು. ತಾಲ್ಲೂಕು ಭಜನಾ ಪರಿಷತ್ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿರ ಮಾತನಾಡಿ ” ಭಜನಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಮಾಡುವ ಹೇಳಿದರು. ಸಮಾಜಕ್ಕೆ ಉತ್ತಮ ಸಂಸ್ಕಾರ, ಸಂಪ್ರದಾಯ ಗಳನ್ನು ಬೆಳೆಸುವಲ್ಲಿ ಜನರು ಸಹಕಾರ ನೀಡುವ ಅಗತ್ಯತೆ’ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ “ತಾಲೂಕು ಭಜನಾ ಪರಿಷತ್ತಿನ ಕಾರ್ಯವೈಕರಿ ಹಾಗೂ ಭಜನೆಯಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಮಕ್ಕಳಿಗೆ ಸಂಸ್ಕಾರ ಕಲಿಸುವಂತಹ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸ ಬೇಕು. ಉತ್ತಮ ಸಂಘಟನೆಯನ್ನು ನಿರ್ಮಾಣ ಮಾಡಲು ಭಜನಾ ಮಂಡಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ”. ಎಂದು ತಿಳಿಸಿದರು.
ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ವಲಯದಲ್ಲಿ ನಡೆಸುವುದಾಗಿ ತಿಳಿಸಿದರು.















ಸುಳ್ಯ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ ಮತ್ತು ಕಾರ್ಯದರ್ಶಿ ಸತೀಶ್ ಟಿ ಎನ್ ರವರು ತಾಲ್ಲೂಕು ಭಜನಾ ಕಾರ್ಯಕ್ರಮ ಬಗ್ಗೆ ತಿಳಿಸಿದರು ಹಾಗೂ ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮ ಮಾಡುವಲ್ಲಿ ಸಹಕಾರ ಕೇಳಿದರು.
ಸಮಿತಿ ರಚನೆ : ಅಧ್ಯಕ್ಷರಾಗಿ ಪ್ರಕಾಶ್ ನರಿಯಂಗ ,ಉಪಾಧ್ಯಕ್ಷರಾಗಿ ಲಕ್ಷ್ಮಣ ಸಂಕಡ್ಕ , ಕಾರ್ಯದರ್ಶಿಯಾಗಿ ನಿರ್ಮಲಾ ಎಸ್ ಪಲ್ಲೋಡಿ,ಜೊತೆ ಕಾರ್ಯದರ್ಶಿಯಾಗಿ ಯತೀಶ್ ಕಟ್ಟೆಮನೆ,
ಕೋಶಾಧಿಕಾರಿಯಾಗಿ ನಾಗಪ್ಪ ಗೌಡ ಪಂಜದ ಬೈಲು, ಸದಸ್ಯರಾಗಿ
ಎಲ್ಯಣ್ಯ ಗೌಡ ಕಟ್ಟ, ಸರಿತಾ, ಆದರ್ಶ ಬನ, ಗಣೇಶ್ ಬೊಳ್ಮಲೆ, ನಾರಾಯಣ ಶಿರಾಜೆ ರವರನ್ನು ಆಯ್ಕೆ ಮಾಡಲಾಯಿತು.
ವಲಯದ ಭಜನಾ ಪರಿಷತ್ ನಿರ್ದೇಶಕ ಚಂದ್ರಕಾಂತ ಬಳ್ಪ, ಸ್ವಸಹಾಯ ಸಂಘಗಳ ಒಕ್ಕೂಟದ ವಲಯದ ಅಧ್ಯಕ್ಷ ಧರ್ಮಪಾಲ ಕಣ್ಕಲ್ ಉಪಸ್ಥಿತರಿದ್ದರು.
ಪಂಜ ವಲಯದಲ್ಲಿ 10 ಭಜನಾ ಮಂಡಳಿ ಸದಸ್ಯರು ,. ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ರೈ ಅರ್ಗುಡಿ ಪ್ರಾರ್ಥಿಸಿದರು.ಕೇನ್ಯ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ವೀಣಾ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ರೋಹಿಣಿ ನಿರೂಪಿಸಿದರು. ಕೂತ್ಕುಂಜ ಸೇವಾಪ್ರತಿನಿಧಿ ಕವಿತಾ ವಂದಿಸಿದರು.










