ಜೋಗಿಯಡ್ಕ – ನೇಣಾರು ಕಾಲೋನಿ ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿ

0

ಶ್ರೀಧರ ಕರ್ಮಜೆಯವರ ಮುಂದಾಳತ್ವದಲ್ಲಿ ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ಥಿ

ಅಮರ ಮುಡ್ನೂರು ಪಂಚಾಯತ್ ವ್ಯಾಪ್ತಿಯ ಜೋಗಿಯಡ್ಕ ನೇಣಾರು ಹರಿಜನ ಗಿರಿಜನ ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿದೆ.
ದಿನಂಪ್ರತಿ ನೂರಾರು ಜನರಿಗೆ, ವಿದ್ಯಾರ್ಥಿಗಳು, ದೈನಂದಿನ ದಿನಚರಿಯ ಚಟುವಟಿಕೆಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿರುತ್ತಾರೆ.


ಹತ್ತಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಲಿಲ್ಲ. ಇದೀಗ ಈ ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿ ಇರುವುದರಿಂದ ಶ್ರೀಧರ ಕರ್ಮಜೆಯವರ ಮುಂದಾಳತ್ವದಲ್ಲಿ ಸ್ಥಳೀಯರಾದ ಪುರುಷೋತ್ತಮ ಅಡ್ತಲೆ, ಮುರಳಿ ಕೊಪ್ಪತಡ್ಕ ಕುಕ್ಕ ಮುಗೆರ, ಉಮಾನಾಥ ಕೊಪ್ಪ ತಡ್ಕ ರವರ ಸಹಕಾರದೊಂದಿಗೆ ಜೆಸಿಬಿಯ ಹಾಗೂ ಶ್ರಮದಾನದೊಂದಿಗೆ ತುರ್ತು ಕಾಮಗಾರಿ ಕೈಗೊಳ್ಳಲಾಯಿತು.
ಪಂಚಾಯತ್ ನವರಾಗಲಿ, ಜನಪ್ರತಿನಿಧಿಗಳಾಗಲಿ ಇದುವರೆಗೆ ನೋಡಲಿಲ್ಲ. ಈ ರಸ್ತೆಯ ಪಕ್ಕದಲ್ಲಿ ಸುಮಾರು 30 ಅಡಿ ಆಳದ ಗುಂಡಿ ಇದ್ದು ರಸ್ತೆ ಸಂಪರ್ಕ ಕಡಿತದ ಅಪಾಯದಲ್ಲಿದೆ.
ಇದರಿಂದ ವಾಹನ ಸವಾರರು ಜೀವ ಭಯದಲ್ಲಿ ವಾಹನ ಚಲಾಯಿಸುವಂತಾಗಿದೆ.
ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.