ರೋಟರಿ ಕ್ಲಬ್ ಸುಳ್ಯ 2024 -25 ರ ಸಾಲಿನಲ್ಲಿ ಹಮ್ಮಿಕೊಂಡಂತಹ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಾದ ಸಮುದಾಯ ಸೇವೆ, ಕೌಶಲ್ಯಾಭಿವೃದ್ಧಿ, ಸಾಮಾಜಿಕ ಅರಿವು, ಪಬ್ಲಿಕ್ ಇಮೇಜ್ , ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ದೇಣಿಗೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳಿಗಾಗಿ ರೊಟರಿ ಜಿಲ್ಲೆ 3181ರ ದೊಡ್ಡ ಕ್ಲಬ್ ಗಳ ಸಾಲಿನಲ್ಲಿ “ಸಿಗ್ನಿಫಿಕೆಂಟ್ ಅವಾರ್ಡ್ “, “ಔಟ್ ರೀಚ್ ಎಕ್ಸಲೆನ್ಸ್ ಅವಾರ್ಡ್” ಮತ್ತು “ಡೈಮಂಡ್ ಅವಾರ್ಡ್” ಲಭಿಸಿದೆ.















ಮಂಗಳೂರಿನ ಪಿಲಿಕುಳದ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಟ್ರೈನಿಂಗ್ ಸೆಂಟರ್ ನಲ್ಲಿ ಜೂ. 21 ರಂದು ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರೊ ವಿಕ್ರಮ್ ದತ್ತರವರು ಪ್ರಶಸ್ತಿ ವಿತರಿಸಿದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ ಆಫೀಸರ್ಸ್ ರೊ.ಡಾ. ಕೇಶವ್ ಪಿ ಕೆ, ರೊ.ಡಾ. ಪುರುಷೋತ್ತಮ್ ಕೆ ಜಿ, ರೊ. ಪ್ರಭಾಕರನ್ ನಾಯರ್ ಕೆ, ರೊ. ವಿನಯಕುಮಾರ್ ಕೆ, ನಿಯೋಜಿತ ಅಧ್ಯಕ್ಷ ರೊ. ಡಾ. ರಾಮ್ ಮೋಹನ್ ಕೆ.ಎನ್ ಹಾಗೂ ಭಾಗವಹಿಸಿದ ಸದಸ್ಯರುಗಳಾದ ರೊ. ಗೋಪಿನಾಥ್ ಎಂ.ಪಿ, ರೊ. ಹರಿರಾಯ ಕಾಮತ್, ರೊ. ಕಸ್ತೂರಿ ಶಂಕರ್, ರೊ.ಸತೀಶ್ ಎಂ.ಕೆ, ರೊ. ಮಮತಾ ಸತೀಶ್,ರೊ.ಶ್ರೀನಿವಾಸ್ ಭೀಮಗುಳಿ,ರೊ. ದಿವ್ಯಾ ಶ್ರೀನಿವಾಸ್,ರೊ.ಜಿತೇಂದ್ರ ಎನ್.ಎ, ರೊ. ಶೈಮಾ ಜಿತೇಂದ್ರ, ರೊ. ಸಂಜೀವ ಕುದ್ಪಾಜೆ, ರೊ.ಧನಲಕ್ಷ್ಮಿ ಕುದ್ಪಾಜೆ, ರೊ.ಮಾಧವ್ ಬಿ.ಟಿ, ರೊ. ಪ್ರಸನ್ನಕುಮಾರ್ ಕಲ್ಲಾಜೆ, ರೊ. ಗಣೇಶ್ ಭಟ್ ಪಿ, ರೊ. ದಯಾನಂದ್ ಆಳ್ವ ಜೊತೆಗೂಡಿ ಅಧ್ಯಕ್ಷೆ ರೊ.ಯೋಗಿತ ಗೋಪಿನಾಥ್ ಹಾಗು ಕಾರ್ಯದರ್ಶಿ ರೊ.ಡಾ ಹರ್ಷಿತ ಪುರುಷೋತ್ತಮ್ ಪ್ರಶಸ್ತಿ ಸ್ವೀಕರಿಸಿದರು.










