ಪದ್ಮಯ್ಯ ಗೌಡ ಆರ್ವಾರರವರಿಗೆ ಶ್ರದ್ಧಾಂಜಲಿ, ವೈಕುಂಠ ಸಮಾರಾಧನೆ

0

ಕನ್ನಯ ಕುಟುಂಬದ ಯಜಮಾನ, ಕೊಡಿಯಾಲ ಗ್ರಾಮದ ಕೃಷಿಕ ಆರ್ವಾರ ಪದ್ಮಯ್ಯ ಗೌಡರವರು ಜೂ.12ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜೂ.28 ರಂದು ಪೆರುವಾಜೆ ಜೆ.ಡಿ.ಅಡಿಟೋರಿಯಂನಲ್ಲಿ ನಡೆಯಿತು.
ಯತೀಶ್ ಆರ್ವಾರರವರು ಸ್ವಾಗತಿಸಿದರು.
ಶಿಕ್ಷಣ ಇಲಾಖೆಯ ಸವಣೂರು ಕ್ಲಸ್ಟರ್ ನ ಸಿ.ಆರ್.ಪಿ ಜಯಂತ ವೈಯವರು ದಿ.ಪದ್ಮಯ್ಯ ಗೌಡ ಆರ್ವಾರರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಮೃತರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮಿ, ಪುತ್ರರಾದ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಜನಾರ್ದನ ಗೌಡ ಆರ್ವಾರ ,ಕ್ಯಾ.ನಾಗೇಶ್ ಗೌಡ ಆರ್ವಾರ,ಅಶೋಕ್ ಗೌಡ ಆರ್ವಾರ ಸುರೇಶ್ ಗೌಡ ಆರ್ವಾರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.