ಆಲೆಟ್ಟಿ: ನಾರ್ಕೋಡು ದ್ವಾರದ ಬಳಿ ಕಾರು-ಅಟೋ ಟ್ಯಾಕ್ಸಿ ನಡುವೆ ಅಪಘಾತ- ಗಾಯಗೊಂಡ ಪ್ರಯಾಣಿಕರು, ಆಸ್ಪತ್ರೆಗೆ ದಾಖಲು

0

ಇಲ್ಲಿ ಪದೇ ಪದೇ ಅಫಘಾತವಾಗುತ್ತಿದೆ-ವೈಜ್ಞಾನಿಕ ಮಾರ್ಗಸೂಚಿ ಅಳವಡಿಸಿ-ನಾಗರಿಕರ ಆಗ್ರಹ

ಆಲೆಟ್ಟಿ ರಸ್ತೆಯ ನಾರ್ಕೋಡು ಸದಾಶಿವ ದೇವಸ್ಥಾನದ ದ್ವಾರದ ಬಳಿಯಲ್ಲಿ ಕಾರು ಮತ್ತು ಅಟೋ ಟ್ಯಾಕ್ಸಿಡಿಕ್ಕಿಯಾಗಿ ಟ್ಯಾಕ್ಸಿಯಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಜೂ. 28 ರಂದು ಮಧ್ಯಾಹ್ನ ಸಂಭವಿಸಿದೆ.

ಕೇರಳದ ಪಾಣತ್ತೂರು ಕಡೆಯಿಂದ ಬರುತ್ತಿದ್ದ (ಕೆ.ಎಲ್.77 9177) ಅಟೋ ಟ್ಯಾಕ್ಸಿ ದ್ವಾರದ ಬಳಿ ನಿಲ್ಲಿಸಿ ಮುಖ್ಯರಸ್ತೆಗೆ ಮುಂದಕ್ಕೆ ಚಲಿಸಿದಾಗ ಸುಳ್ಯದಿಂದ ಬಂದಡ್ಕ ಕಡೆಗೆ ಸಂಚರಿಸುತ್ತಿದ್ದ (ಕೆ.ಎಲ್.14 ಎಎ 8670) ಕಾರು ಡಿಕ್ಕಿ ಹೊಡೆದಿದೆ.

ಕೆ.ಎಲ್ ನೋಂದಾವಣೆಯ ಎರಡು ವಾಹನಗಳ ನಡುವೆ ಸಂಭವಿಸಿದ ತೀವ್ರವಾದ ಅಪಘಾತದಲ್ಲಿ ಟ್ಯಾಕ್ಸಿ ಯಲ್ಲಿ ಎದುರು ಸೀಟಿನಲ್ಲಿ ಕುಳಿತಿದ್ದ ಮಕ್ಕಳು ಸೇರಿದಂತೆ ಮೂರು ಮಂದಿ ಗಾಯಗೊಂಡರು. ತಕ್ಷಣ ಅವರನ್ನು ಸ್ಥಳೀಯರು ಬೇರೆ ವಾಹನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದು ಬಂದಿದೆ.
ಅಟೋ ಚಾಲಕನ ಕಾಲಿಗೆ ಏಟಾಗಿದ್ದು ಕಾರಿನಲ್ಲಿ ಚಾಲಕ ಮಾತ್ರವಿದ್ದು ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಕಾರಿನ ಎದುರಿನ ಚಕ್ರ ಒಡೆದುಹೋಗಿಮುಂಭಾಗ ಜಖಂಗೊಂಡಿದೆ.ಅಟೋ ಟ್ಯಾಕ್ಸಿಯ ಎದುರಿನ ಗಾಜು ಸಮೇತ ಪುಡಿಯಾಗಿ ಮುಂಭಾಗ ಸಂಪೂರ್ಣಜಖಂಗೊಂಡಿದೆ. ವಿಷಯ ತಿಳಿದ
ಸುಳ್ಯ ಪೋಲಿಸರು ಸ್ಥಳಕ್ಕಾಗಮಿಸಿ‌ ಮಹಜರು ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಮಾರ್ಗ ಸೂಚಿ ವ್ಯವಸ್ಥೆ ಹಾಕಬೇಕು- ಸ್ಥಳೀಯರ ಬೇಡಿಕೆ

ಇದೇ ಸ್ಥಳದಲ್ಲಿ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದೆ.ಯಾಕೆಂದರೆ ಇದೊಂದು ಅಫಘಾತ ವಲಯವಾಗಿ ಮಾರ್ಪಾಡಾಗಿದೆ. ಅದಕ್ಕೆ ಮುಖ್ಯ ಕಾರಣ
ಆಲೆಟ್ಟಿ ಕಡೆಯಿಂದ ಬರುವಂತ ವಾಹನಗಳು ದ್ವಾರದ ಅಡಿಭಾಗದಲ್ಲಿ ನಿಂತು ಮುಂದಕ್ಕೆ ‌ಚಲಿಸುವ ಸಂದರ್ಭ ಸುಳ್ಯದಿಂದ ಬರುವ ವಾಹನಗಳು ಯಾವ ಕಡೆಗೆ ಹೋಗುವುದೆಂಬ ಗೊಂದಲದಿಂದಾಗಿ ಚಾಲಕರಿಗೆ ನಿಖರವಾಗಿ ನಿರ್ಣಯಿಸಲು ಸಾಧ್ಯವಾಗದೆ ಈ ರೀತಿಯಾಗಿ ಅಪಘಾತ ಆಗಾಗಸಂಭವಿಸುತ್ತಿದೆ. ಇದಕ್ಕೊಂದು ಸೂಕ್ತ ರೀತಿಯ ಸೂಚನಾ ಫಲಕ ಅಥವಾ ಡಿವೈಡರ್ , ಹಂಪ್ ಏನಾದರೊಂದು ಮಾರ್ಗಸೂಚಿಯನ್ನು ಅಳವಡಿಸುವ ಅವಶ್ಯಕತೆ ಇರುವುದು.ಈ ಸ್ಥಳದಲ್ಲಿ ಪ್ರತಿಬಾರಿಯೂಚಾಲಕರಿಗೆ ಗೊಂದಲದಿಂದಾಗಿಯೇ ಅಪಘಾತ ನಡೆಯುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ದೂರಿಕೊಂಡಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಮುತುವರ್ಜಿ ವಹಿಸಿ ಅವಘಡ ಸಂಭವಿಸಿದಂತೆ ವೈಜ್ಞಾನಿಕ ವಾಗಿ ಪರಿಹಾರದ ಮಾರ್ಗ ಸೂಚಿಯನ್ನು ಅಳವಡಿಸಿದರೆ ಮುಂದಕ್ಕೆ ಅಫಘಾತ ಅನಾಹುತ ಸಂಭವಿಸುವುದನ್ನು ತಡೆಯಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.