ಜು. 5: ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನೈಶ್ಚರ ಪೂಜೆಹಾಗೂ ಬಲಿವಾಡು ಕೂಟ

0

ಶ್ರೀಮಜ್ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಂ ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠ, ಇದರ ಆಶ್ರಯದಲ್ಲಿ ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ
ಪೂರ್ಣಾನುಗ್ರಹಗಳೊಂದಿಗೆ ಸಮಸ್ತ ಭಕ್ತ ಜನರ ಶನಿದೋಷ ಪರಿಹಾರ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಬಲಿವಾಡು ಕೂಟ ಜು. 5ರಂದು ಬೆಳಿಗ್ಗೆ 9-00 ಗಂಟೆಯಿಂದ ನಡೆಯಲಿದೆ. ಪೂಜೆ ಮಾಡಿಸುವವರು ರೂ. 300/- ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.