ಅಜ್ಜಾವರ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಉಪಾಧ್ಯಕ್ಷ ಶೌಕತ್ ಆಲಿ

0

ಅಜ್ಜಾವರ ಸರಕಾರಿ ಪ್ರೌಢಶಾಲೆ ಇಲ್ಲಿಯ ಎಸ್.ಡಿ.ಎಂ.ಸಿ. ಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ ಹಾಗೂ ಉಪಾಧ್ಯಕ್ಷರಾಗಿ ಶೌಕತ್ ಆಲಿ ಆಯ್ಕೆಯಾಗಿದಾರೆ.

ಜೂ.೨೮ರಂದು ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕರಾದ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ನೂತನ ಸಮಿತಿಯ ಸದಸ್ಯರುಗಳಾಗಿ ರಾಮ ನೆಹರೂನಗರ, ಪಾರ್ವತಿ, ಜನಾರ್ದನ, ಶಮೀರಾ, ಸುಮೈಮಾ, ಗುರುರಾಜ್ ಅಜ್ಜಾವರ, ಹೇಮಲತಾ ಆಯ್ಕೆಯಾದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚನಿಯ ಕಲ್ತಡ್ಕ, ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ಲ, ಶಿಕ್ಷಕಿ ವಿದ್ಯಾ ಶಂಕರಿ ಉಪಸ್ಥಿತರಿದ್ದರು.