ಇಂದು ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಸೋಣಂಗೇರಿ – ಗುತ್ತಿಗಾರು ರಸ್ತೆಯ ಕಂದಡ್ಕ ಎಂಬಲ್ಲಿ ಉಬರಡ್ಕ ಕಡೆಗೆ ತಿರುಗುವಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಗಿದೆ. ಮರ ವಿದ್ಯುತ್ ಕಂಬದ ಮೇಲೆ ಬಿದ್ದ ಕಾರಣ ವಿದ್ಯುತ್ ತಂತಿಗಳು ಮುಖ್ಯ ರಸ್ತೆಯ ಮೇಲೆ ಬಿದ್ದು ವಾಹನ ಸಂಚಾರಕ್ಕೆ ತಡೆಯುಂಟಾಯಿತು.









ಮರ ಮುರಿದು ಬೀಳುವ ಸಂದರ್ಭ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಸಂಚಾರಿಸುತ್ತಿದ್ದು, ಅದೃಷ್ಟವಶತ್ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಹಾಗೂ ಕಂದಡ್ಕ – ಉಬರಡ್ಕ ರಸ್ತೆಯ ಬದಿ ಇರುವ ಗೂಡಂಗಡಿಗೂ ಹಾನಿಯಾಗಿದೆ. ಇದೀಗ ತೆರವು ಕಾರ್ಯ ನಡೆಯುತ್ತಿದೆ.










