ದಾರುಲ್ ಹಿಕ್ಮಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ ಇದರ ಮಂತ್ರಿ ಮಂಡಲ ರಚನೆಯು ಜೂ 28 ರಂದು ನಡೆಯಿತು.
2025-26ನೇ ಶೈಕ್ಷಣಿಕ ಸಾಲಿನ ಶಾಲಾ ಮುಖ್ಯಮಂತ್ರಿಯಾಗಿ ಮಹಮ್ಮದ್ ರಹೀಝ್ ಕೆ.ಎಂ(8ನೇ ತರಗತಿ), ಶಾಲಾ ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ಅಫ್ರೀದ್(8ನೇ ತರಗತಿ) ಮತ್ತು ಕ್ರೀಡಾಮಂತ್ರಿಯಾಗಿ ಮುಹಮ್ಮದ್ ಅಸೀದ್(8ನೇ ತರಗತಿ) ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ಶಮೀಮ್(7ನೇ ತರಗತಿ), ಆರೋಗ್ಯ ಮತ್ತು ಶುಚಿತ್ವ ಮಂತ್ರಿಯಾಗಿ ಮುಹಮ್ಮದ್ ಶಾಮೀಲ್ ಬಿ.ಎಚ್(7ನೇ ತರಗತಿ), ಶಿಸ್ತು ಮಂತ್ರಿಯಾಗಿ ಅಶ್ಫರ್ ಅಬ್ದುಲ್ಲಾ(7ನೇ ತರಗತಿ), ಗೃಹಮಂತ್ರಿಯಾಗಿ ಮುಹಮ್ಮದ್ ಅಜ್ಮೀರ್(7ನೇ ತರಗತಿ), ನೀರಾವರಿ ಮಂತ್ರಿಯಾಗಿ ಮುಹಮ್ಮದ್ ಆದಿಲ್ ಶಾ(7ನೇ ತರಗತಿ), ವಾರ್ತಾಮಂತ್ರಿಯಾಗಿ ಮುಹಮ್ಮದ್ ಜಂಶೀರ್(7ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಮುಹಮ್ಮದ್ ಶಹೀದ್(7ನೇ ತರಗತಿ) ಮತ್ತು ವಿರೋಧಪಕ್ಷದ ನಾಯಕರಾಗಿ ಹಿಬಾ ಫಾತಿಮ ಬಿ.ಎಚ್, ಮುಹಮ್ಮದ್ ಶಾಹಿಕ್ ಎನ್ ಮತ್ತು ಮುಹಮ್ಮದ್ ನಶತ್ ಆಯ್ಕೆಯಾದರು.








ವಿದ್ಯಾರ್ಥಿಗಳು ಇವಿಎಮ್ ಮೆಷಿನ್ ಮೂಲಕ ಮತ ಚಲಾಯಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹಮೀದ್ ಅಲ್ಫಾ ಆಯ್ಕೆಯಾದ ಅಭ್ಯರ್ಥಿಗಳನ್ನು ಸ್ವಾಗತಿಸಿದರು . ಶಾಲಾ ಮುಖ್ಯೋಪಾಧ್ಯಾಯಿನಿ ಸಬೀದಾ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮತದಾನದಲ್ಲಿ ಶಾಲಾ ಶಿಕ್ಷಕಿಯರು ಸಹಕರಿಸಿದರು.










