ಜಯನಗರ ವಾರ್ಡ್‌ಗೆ ಕಾಂಗ್ರೆಸ್ ನಾಯಕರ ನಿಯೋಗ ಭೇಟಿ

0

ರಸ್ತೆಯ ಹೊಂಡ ಗುಂಡಿ ವೀಕ್ಷಣೆ, ಅನುದಾನ ತರಿಸಲು ಪ್ರಯತ್ನಿಸುವ ಬಗ್ಗೆ ಭರವಸೆ

ಜಯನಗರ ರಸ್ತೆ ಸಮಸ್ಯೆ ಬಗ್ಗೆ ಸ್ಥಳೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನವಿ ಮೇರೆಗೆ ಪಕ್ಷದ ಮುಖಂಡರುಗಳಾದ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ ಹಾಗೂ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಸೇರಿದಂತೆ ನಾಯಕರ ನಿಯೋಗವು ಜು. ೮ ರಂದು ಜಯನಗರ ಪರಿಸರಕ್ಕೆ ಭೇಟಿ ನೀಡಿ ರಸ್ತೆ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು.

ಹಳೆಗೇಟು ಹೊಸಗದ್ದೆ ಸಮೀಪದಿಂದ ಜಯನಗರ ಕುದ್ಪಾಜೆ ರಸ್ತೆಯವರೆಗೆ ಭೇಟಿ ನೀಡಿ ಪರಿಸರದ ಸಮಸ್ಯೆಗಳನ್ನು ವೀಕ್ಷಿಸಿದ ಮುಖಂಡರುಗಳಿಗೆ ಸ್ಥಳೀಯ ನ. ಪಂ ಸದಸ್ಯರಾದ ಬಾಲಕೃಷ್ಣ ಭಟ್ ಕೊಡಂಕೇರಿಯವರು ಈ ಭಾಗದ ರಸ್ತೆ ಚರಂಡಿ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ಸರಕಾರದಿಂದ ವಿಶೇಷ ಅನುದಾನ ತರಿಸಿ ಕೊಡುವಂತೆ ಮನವಿ ನೀಡಿ ವಿನಂತಿಸಿಕೊಂಡರು.


ಮನವಿ ಸ್ವೀಕರಿಸಿ ಮಾತನಾಡಿದ ಜಿ.ಕೃಷ್ಣಪ್ಪರವರು ಈ ಭಾಗದ ಅಭಿವೃದ್ಧಿಗೆ ಎಂ ಎಲ್ ಸಿ, ಅಥವಾ ಸರಕಾರದಿಂದ ಬರುವ ಯೋಜನೆಗಳನ್ನು ಶೀಘ್ರದಲ್ಲಿ ತರಿಸಿಕೊಡುವ ಬಗ್ಗೆ ಭರವಸೆ ನೀಡಿದರು. ಅಲ್ಲದೆ ಈ ಭಾಗದ ಶಾಸಕರು ಕೂಡ ಇತ್ತ ಗಮನ ಹರಿಸಿ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನ ಪಂ ಸದಸ್ಯ ಶರೀಫ್ ಕಂಠಿ, ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೋ, ಸಂಪಾಜೆ ಗ್ರಾ. ಪಂ ಮಾಜಿ ಅಧ್ಯಕ್ಷ ಜಿ ಕೆ ಹಮೀದ್, ಸದಸ್ಯ ಎಸ್ ಕೆ ಹನೀಫ್,ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ ಎಂ ಜೆ ಪಕ್ಷದ ಮುಖಂಡರುಗಳಾದ ಜಯರಾಮ ಬೆಟ್ಟ, ಬಶೀರ್ ಬೆಳ್ಳಾರೆ, ಫಕಿರೇಶ್ ಜಯನಗರ, ಇಕ್ಬಾಲ್ ಸುಣ್ಣಮೂಲೆ, ಸುಂದರ ಕುದ್ಪಾಜೆ, ಅಝೀಜ್ ಬಿ ಎಂ, ಮೊದಲಾದವರು ಉಪಸ್ಥಿತರಿದ್ದರು.