ಸುಳ್ಯ ಖಾಸಗಿ ಬಸ್ಸ್ ನಿಲ್ದಾಣ ಬಳಿ ಯಿಂದ ಸಾಗಿ ಗಾಂಧಿನಗರದಲ್ಲಿ ಸಮಾರೋಪಗೊಳ್ಳಲಿದೆ ಸೌಹಾರ್ದ ನಡಿಗೆ
ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಘಟಕರು
ಸುನ್ನಿ ಯುವಜನ ಸಂಘ ಎಸ್ ವೈ ಎಸ್ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಸೌಹಾರ್ದ ಸಂಚಾರ ಜಾಥಾ ಜು. 16 ರಂದು ಸುಳ್ಯಕ್ಕೆ ಆಗಮಿಸಿ ಖಾಸಗಿ ಬಸ್ಸು ನಿಲ್ದಾಣ ಬಳಿಯಿಂದ ಗಾಂಧಿ ನಗರ ವರೆಗೆ ಸೌಹಾರ್ದ ನಡಿಗೆ ಬಳಿಕ ಸಮಾರಂಭ ನಡೆದು ಸಮಾರೋಪ ಗೊಳ್ಳಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಮುಖಂಡರುಗಳು ಜು 11 ರಂದು ಸುಳ್ಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಸ್ವಾಗತ ಸಮಿತಿಯ ಚೆರ್ಮೆನ್ ಮಹಮ್ಮದ್ ಕುಂಞಿ ಗೂನಡ್ಕ ರವರು ‘ಕರಾವಳಿ ಕರ್ನಾಟಕವನ್ನು ಒಂದು ಸೌಹಾರ್ದ ಬೀಡನ್ನಾಗಿ ರೂಪಿಸಲು ಈ ಒಂದು ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ “ಹೃದಯ ಹೃದಯಗಳನ್ನು ಬೆಸೆಯೋಣ” ಎಂಬ ದ್ವೇಯ ವಾಕ್ಯದೊಂದಿಗೆ ಸುನ್ನೀ ಯುವಜನ ಸಂಘ SYS ರಾಜ್ಯ ಸಮಿತಿಯು ಜುಲೈ 14, 15, 16 ಈ ಮೂರು ದಿನಗಳ ಸೌಹಾರ್ದ ಸಂಚಾರ ವನ್ನು ಹಮ್ಮಿಕೊಂಡಿದ್ದು, ಕುಂದಾಪುರ ದಿಂದ ಸುಳ್ಯ ದವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 15ಕೇಂದ್ರಗಳಲ್ಲಿ ಎಲ್ಲಾ ಪಕ್ಷ, ಜಾತಿ,ಮತ, ಪಂಥ-ಪಂಗಡಗಳ ಜನರನ್ನು ಒಟ್ಟು ಸೇರಿಸಿಕೊಂಡು ಕೈ ಕೈ ಹಿಡಿದು ಕಾಲ್ನಡಿಗೆಯಲ್ಲಿ ಸಂಚರಿಸುವ ವಿಶೇಷವಾದ ಕಾರ್ಯಕ್ರಮ ಇದಾಗಿದೆ.















ಈ ಸೌಹಾರ್ದ ಸಂಚಾರ ಎಂಬ ಜಾಥಾದಲ್ಲಿ ಎಲ್ಲಾ ಧರ್ಮೀಯರೂ ಒಟ್ಟಾಗಿ ಭಾಗವಹಿಸಲಿದ್ದು, ಆ ಮೂಲಕ ಸೌಹಾರ್ದ ಸಮಾಜ ಕಟ್ಟಲು ನಾವೆಲ್ಲರೂ ಕೈ ಈ ಕಾರ್ಯಕ್ರಮದ ಮೂಲಕ ಜೋಡಿಸುತ್ತಿದ್ದೇವೆ.
ಜುಲೈ 16 ಸಂಜೆ 4:30 ಕ್ಕೆ ಸೌಹಾರ್ದ ಸಂಚಾರ ಜಾಥವು ಸುಳ್ಯಕ್ಕೆ ತಲುಪಲಿದ್ದು ಬಳಿಕ ಅಲ್ಲಿಂದ ಮುಸ್ಲಿಂ, ಹಿಂದು, ಕ್ರೈಸ್ತ, ಜೈನ, ಭೌದ್ಧ ಧರ್ಮದವರು ಆಗುವುದರೊಂದಿಗೆ ಇವೆಲ್ಲಕ್ಕಿಂತ ಮೊದಲು ಮಾನವರಾಗೋಣ ಎಂಬ ಸಂದೇಶವನ್ನು ಸಾರುತ್ತಾ ಗಾಂಧಿನಗರ ವರೆಗೆ ಸಾಗಿ ಅಲ್ಲಿ ಕಿರು ಸಭೆ ನಡೆಸಿ ಸೌಹಾರ್ದ ಸಂದೇಶ ಭಾಷಣ ಮೂಲಕ ಸಮಾರೋಪ ಗೊಳಿಸಲಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಜ್ಲಿಸ್ ಎಜುಕೇಷನ್ ಇದರ ಚೆರ್ಮೆನ್ ಸಯ್ಯದ್ ಅಶ್ರಫ್ ತಂಙಳ್ ಆದೂರ್,ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜಿ, ಗುತ್ತಿಗಾರು ಹಾಗೂ ನೆಟ್ಟಣ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯ ಜನ ಸಾಮಾನ್ಯ ಆಯೋಗ ದ ನಿರ್ದೇಶಕರಾದ ಫಾದರ್ ಆದರ್ಶ್ ಜೋಸೆಫ್ ಹಾಗೂ ಎಲ್ಲಾ ಧಾರ್ಮಿಕ ಮುಖಂಡರುಗಳು, ಸಾಮಾಜಿಕ ರಾಜಕೀಯ ಮುಖಂಡರುಗಳು,ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಆದ್ದರಿಂದ ಸುಳ್ಯದ ಎಲ್ಲಾ ಧಾರ್ಮಿಕ ಮುಖಂಡರು ಗಳು, ಸಂಘ ಸಂಸ್ಥೆಯ ಕಾರ್ಯಕರ್ತರುಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿ ಕೊಡುವಂತೆ ಪತ್ರಿಕಾಗೋಷ್ಠಿ ಮೂಲಕ ವಿನಂತಿಸಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ವೈಸ್ ಚಯರ್ಮೇನ್ ಕೆ.ಎಂ.ಮುಸ್ತಫ ಜನತಾ,
ಜನರಲ್ ಕಂನ್ವಿನರ್ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್,ಫಿನಾನ್ಸ್ ಸೆಕ್ರೆಟರಿ ಅಡ್ವಕೇಟ್ ಮೂಸಾ ಕುಂಞಿ ಪೈಂಬೆಚ್ಚಾಲ್,
ಕೋರ್ಡಿನೆಟರ್ ಸಿದ್ದೀಕ್ ಗೂನಡ್ಕ,ಮುಖಂಡರು
ಗಳಾದ ಹಮೀದ್ ಸುಣ್ಣಮೂಲೆ, ಹಸೈನಾರ್ ಗುತ್ತಿಗಾರ್,ಅಬ್ದುಲ್ ಲತೀಫ್ ಜೊಹರಿ ಉಪಸ್ಥಿತರಿದ್ದರು.










