ಶಾಸಕರಿಂದ ಗಿಡ ನಾಟಿಗೆ ಚಾಲನೆ

ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ಎಸ್. ಡಿ. ಎಮ್. ಸಿ ಮಾಜಿ ಅಧ್ಯಕ್ಷೆ ಹಾಗೂ ಶಾಲಾ ದತ್ತು ಸ್ವೀಕೃತರಾದ ಶ್ರೀಮತಿ ಮಧು ಯತೀಶ್ ಪಾಲೋಳಿಯವರು ಶಾಲೆಗೆ ಹೆಚ್ಚಿನ ಆದಾಯಕ್ಕಾಗಿ ಸ್ವಂತ ಖರ್ಚಿನಿಂದ ಶಾಲಾ ಗುಡ್ಡೆಯನ್ನು ಸಮತಟ್ಟು ಮಾಡಿಸಿ ಪ್ರಥಮ ಹಂತವಾಗಿ ೨೫೦ ಗುಂಡಿ ತೆಗೆಸಿ ೨೫೦ ಅಡಿಕೆ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಅಡಿಕೆ ಗಿಡ ನೆಟ್ಟು ಶಾಲಾ ಆದಾಯ ಹೆಚ್ಚಿಸುವ ಬಗ್ಗೆ ಯೋಚಿಸಿ, ಅಡಿಕೆ ತೋಟ ರಚಿಸಿ ಅದನ್ನು ನಾಲ್ಕು ವರ್ಷಗಳ ಕಾಲ ನೋಡಿಕೊಳ್ಳುವ ಶಾಲಾ ಸ್ವೀಕೃತರ ಬಗ್ಗೆ ಮಾತಾಡಿ ಶ್ಲಾಘನೆ ಮಾಡಿ, ಮುಂದೆಯು ಶಾಲೆ ಅಭಿವೃದ್ಧಿ ಬಗ್ಗೆ ಪಣತೊಡಬೇಕೆಂದರು.
















ಈ ಸಂದರ್ಭದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಪಂಚಾಯತ್ ಉಪಾಧ್ಯಕ್ಷೆ ಕು . ಜಾನಕಿ ಮುರುಳ್ಯ, ಸದಸ್ಯರಾದ ಕರುಣಾಕರ ಗೌಡ ಹುದೇರಿ, ಶಾಲಾ ದತ್ತು ಸ್ವೀಕೃತ ದಂಪತಿಗಳಾದ ಶ್ರೀಮತಿ ಮಧು ಪಿ.ಆರ್. ಮತ್ತು ಯತೀಶ್ ಪಾಲೋಲಿ, ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಅವಿನಾಶ್ ದೇವರಮಜಲು ಅವರ ತಾಯಿ ಶ್ರೀಮತಿ ವಾರಿಜಾ ದಾಮೋದರ್ , ಉಪಾಧ್ಯಕ್ಷೆ ಶ್ರೀಮತಿ ಸವಿತಾ ಕರಿಂಬಿಲ, ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ಪ ಗೌಡ ಪೂದೆ, ಗಂಗಾಧರ ಪೊಳೆಂಜ, ಮಕ್ಕಳ ಮನೆ ಸಮಿತಿ ಗೌರವಾಧ್ಯಕ್ಷರಾದ ಸುದೇಶ್ ರೈ ಅಲೆಕ್ಕಾಡಿ, ಶಾಲಾ ದಾನಿಗಳಾದ ಶಿವಪ್ಪ ಗೌಡ ಕುದ್ಪಾಜೆ, ಚಂದ್ರಶೇಖರ ಎಂ.ಎಲ್. ಮುರುಳ್ಯ , ನಿವೃತ ಪ್ರೌಢಶಾಲಾ ಶಿಕ್ಷಕ ವೆಂಕಪ್ಪ ಗೌಡ ಆಲಾಜೆ, ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ ಹೇಮಳ, ನಿವೃತ್ತ ಉಪತಹಶೀಲ್ದಾರ್ ಜನಾರ್ಧನ ಅಲೆಕ್ಕಾಡಿ, ಯುವ ಶಕ್ತಿ ಅಧ್ಯಕ್ಷ ರಮಾನಂದ ರೈ ಪೊಳೆಂಜ , ಮಿಲ್ಕ್ ಸೊಸೈಟಿ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಊರುಸಾಗು , ಮಾಜಿ ಸೈನಿಕ ಸುಂದರ ಗೌಡ ಪೀಳಂಕುಜೆ, ಶಾಲಾ ಸಮಿತಿ ಸದಸ್ಯ ನಂದಕುಮಾರ್ ಪಟ್ಲದಮೂಲೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹೇಮಾವತಿ ಹುದೇರಿ ಮೊದಲಾದವರು ಉಪಸ್ಥಿತರಿದ್ದು, ಒಂದೊಂದು ಅಡಿಕೆ ಗಿಡ ನೆಟ್ಟರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಾಲಕೃಷ್ಣ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಶ್ರೀಮತಿ ಮಧು ಯತೀಶ್ ವಂದಿಸಿದರು.











